ʻನಾಟು ನಾಟುʼ ಹಾಡು ದಕ್ಷಿಣ ಕೊರಿಯಾದಲ್ಲಿ ಭಾರಿ ಹಿಟ್‌: ದ.ಕೊರಿಯಾ ವಿದೇಶಾಂಗ ಸಚಿವ

masthmagaa.com:

ಭಾರತ ಮತ್ತು ದಕ್ಷಿಣ ಕೊರಿಯಾ ನಡುವಿನ ಸಂಬಂಧ 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯಾ ವಿದೇಶಾಂಗ ಸಚಿವ ಪಾರ್ಕ್‌ ಜಿನ್‌ ಭಾರತಕ್ಕೆ ಭೇಟಿ ನೀಡಿದ್ದಾರೆ. ನೆನ್ನೆ ಭಾರತಕ್ಕೆ ಬಂದಿರುವ ಜಿನ್‌ ಅವ್ರು ಎರಡು ದಿನಗಳ ಕಾಲ ವಾಸ್ತವ್ಯ ಹೂಡಿದ್ದಾರೆ. ಈ ವೇಳೆ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಹಾಗೂ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವ್ರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಭಾರತ ನಮ್ಮ ಪ್ರಮುಖ ಸ್ಟ್ರಾಟೆಜಿಕ್‌ ಪಾಲುದಾರನಾಗಿದ್ದು, ಉಭಯ ದೇಶಗಳು ಪ್ರಪಂಚದ ಸ್ವಾತಂತ್ರ್ಯ, ಶಾಂತಿ ಮತ್ತು ಸಮೃದ್ಧಿಗೆ ಕೊಡುಗೆ ನೀಡುವ ರಾಜತಾಂತ್ರಿಕತೆಯನ್ನು ಅನುಸರಿಸುತ್ತವೆ. ಭಾರತದ ಜೊತೆಯಲ್ಲಿ ನಮ್ಮ ದ್ವಿಪಕ್ಷೀಯ ಸಂಬಂಧವನ್ನ ಇನ್ನಷ್ಟು ಸದೃಢಗೊಳಿಸುವ ಕುರಿತು ಚರ್ಚೆ ನಡೆಸಲಾಗಿದೆ ಅಂತ ಜಿನ್‌ ಹೇಳಿದ್ದಾರೆ. ಅಷ್ಟೆ ಅಲ್ದೆ ತಾನು ಬಾಲಿವುಡ್‌ ಅಭಿಮಾನಿ ಅಂತ ಹೇಳಿಕೊಂಡಿರುವ ಜಿನ್‌, ಆಸ್ಕರ್‌ ಅವಾರ್ಡ್‌ ಗೆದ್ದಿರುವ RRR ಚಿತ್ರದ ನಾಟು ನಾಟು ಹಾಡು ದಕ್ಷಿಣ ಕೊರಿಯಾದಲ್ಲಿ ಭಾರಿ ಹಿಟ್‌ ಆಗಿದೆ ಅಂತ ಹೇಳಿದ್ದಾರೆ. ಇದೇ ವೇಳೆ ಮಾತಾನಾಡಿರುವ ಜೈಶಂಕರ್‌ ಅವ್ರು, ಆಟೋಮೋಬೈಲ್‌ ಕಂಪನಿ ಹ್ಯುಂಡೈ ಭಾರತ ಹಾಗೂ ದಕ್ಷಿಣ ಕೊರಿಯಾ ನಡುವಿನ ಸಂಬಂಧದ ಸಂಕೇತವಾಗಿದೆ. ಆರ್ಥಿಕ ಸಹಕಾರವನ್ನ ಅಭಿವೃದ್ಧಿಗೊಳಿಸಲು ಉಭಯ ದೇಶಗಳ ನಡುವಿನ ಸಂಬಂಧವನ್ನ ಇನ್ನಷ್ಟು ವಿಸ್ತರಿಸಲಾಗಿದೆ ಅಂತ ಜೈಶಂಕರ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply