ತಂದೆಗೆ ಮಗಳಿಂದ ಸೆಲ್ಯೂಟ್​: ಐಟಿಬಿಪಿ ಫೋಟೋಗೆ ಭಾರಿ ಮೆಚ್ಚುಗೆ

masthmagaa.com:

ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಇನ್​ಸ್ಟಾಗ್ರಾಂನಲ್ಲಿ ಒಂದು ಫೋಟೋ ಶೇರ್ ಮಾಡಿದ್ದು, ಹೆಮ್ಮೆಯ ತಂದೆ ಹೆಮ್ಮೆಯ ಮಗಳಿಂದ ಸೆಲ್ಯೂಟ್ ಸ್ವೀಕರಿಸ್ತಿದ್ದಾರೆ ಅಂತ ಬರೆದಿದೆ. ಈ ಫೋಟೋಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಂದಹಾಗೆ ಈ ಫೋಟೋದಲ್ಲಿರೋ ಅಧಿಕಾರಿ ಎಪಿಎಸ್ ನಿಂಬಾಡಿಯಾ ಐಟಿಪಿಬಿಯಲ್ಲಿ ಡೆಪ್ಯುಟಿ ಇನ್​ಸ್ಪೆಕ್ಟರ್ ಜನರಲ್ ಆಗಿದ್ದಾರೆ. ಇವರಿಗೆ ಸೆಲ್ಯೂಟ್ ಮಾಡ್ತಿರೋದು ಅವರ ಮಗಳು ಅಪೇಕ್ಷಾ ನಿಂಬಾಡಿಯಾ. ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿರೋ ಪೊಲೀಸ್ ಡಾ.ಬಿಆರ್ ಅಂಬೇಡ್ಕರ್ ಪೊಲೀಸ್ ಅಕಾಡೆಮಿಯಲ್ಲಿ ಪದವಿ ಪಡೆದಿದ್ದಾರೆ. ಸದ್ಯದಲ್ಲೇ ಉತ್ತರ ಪ್ರದೇಶ ಪೊಲೀಸ್​​​​ ಇಲಾಖೆಗೆ ಡಿಎಸ್​ಪಿಯಾಗಿ ಸೇರಲಿದ್ದಾರೆ.

-masthmagaa.com

Contact Us for Advertisement

Leave a Reply