ಕ್ರಿಕೆಟ್‌ ವರ್ಲ್ಡ್‌ಕಪ್: ಶತಕವನ್ನು ಗಾಜಾ಼ ಸಂತ್ರಸ್ತರಿಗೆ ಅರ್ಪಿಸಿದ ರಿಜ್ವಾ಼ನ್‌

masthmagaa.com:

ಹೈದಾಬಾದ್‌ನಲ್ಲಿ ನಡೆದ ನಿನ್ನೆಯ ವಿಶ್ವಕಪ್‌ ಪಂದ್ಯದಲ್ಲಿ ಶ್ರೀಲಂಕಾ ನೀಡಿದ 345 ರನ್‌ಗಳ ಬೃಹತ್‌ ಮೊತ್ತವನ್ನು ಚೇಸ್‌ ಮಾಡೋಕೆ ಪಾಕಿಸ್ತಾನಕ್ಕೆ ನೆರವಾದ ಮೊಹಮ್ಮದ್‌ ರಿಜ್ವಾ಼ನ್(131), ತಾವು ಗಳಿಸಿದ ಶತಕವನ್ನು ಗಾಜಾ಼ದ ಯುದ್ಧ ಸಂತ್ರಸ್ತರಿಗೆ ಅರ್ಪಿಸಿದ್ದಾರೆ. ಈ ವೇಳೆ ಅವರು ಹೈದ್ರಾಬಾದ್‌ನ ಜನತೆಗೂ ಧನ್ಯವಾದ ಸಿಳಿಸಿದ್ದಾರೆ. ಈ ಬಗ್ಗೆ X ನಲ್ಲಿ ಬರೆದುಕೊಂಡಿರೋ ಅವರು, “ಈ ಶತಕ ಗಾಜಾ಼ದಲ್ಲಿ ಕಷ್ಟದಲ್ಲಿರೋ ನನ್ನ ಸಹೋದರ-ಸಹೋದರಿಯರಿಗೆ ಅರ್ಪಣೆ. ಗೆಲುವಿಗೆ ಕೊಡುಗೆ ನೀಡಿರುವುದು ಸಂತಸ ತಂದಿದೆ. ಗೆಲುವನ್ನು ಸುಲಭ ಮಾಡಿಕೊಟ್ಟ ಅಬ್ದುಲ್ಲಾ ಶಫಿಕ್‌, ಹಸ್ಸನ್‌ ಅಲಿ ಹಾಗೂ ಇಡೀ ತಂಡಕ್ಕೆ ಕ್ರೆಡಿಟ್ಸ್‌ ಸಲ್ಲಬೇಕು. ಹೈದ್ರಾಬಾದ್‌ನ ಅದ್ಬುತ ಆತಿಥ್ಯ ಹಾಗೂ ಅಭಿಮಾನಿಗಳು ನೀಡಿದ ಸಪೋರ್ಟ್‌ಗಾಗಿ ನನ್ನ ಕೃತಜ್ಙತೆಗಳು” ಅಂತ ಹೇಳಿದ್ದಾರೆ. ಅಂದ್ಹಾಗೆ ಮೊದಲ ಇನ್ನಿಂಗ್ಸ್‌ನಲ್ಲಿ ಕುಸಲ್‌ ಮೆಂಡಿಸ್‌(122) ಹಾಗೂ ಸಮರವಿಕ್ರಮ(108) ಇಬ್ಬರ ಶತಕಗಳ ರನ್‌ಗಳ ನೆರವಿನಿಂದ ಶ್ರೀಲಂಕಾ 345ರನ್‌ ಪೇರಿಸಿತ್ತು. ಇದನ್ನು ಚೇಸ್‌ ಮಾಡೋಕೆ ಬಂದ ಪಾಕ್‌ನ ಮೊದಲೆರಡು ವಿಕೆಟ್‌ಗಳು ಬೇಗನೆ ಬಿದ್ವು, 3ನೇ ವಿಕೆಟ್‌ಗೆ ಜೊತೆಯಾದ ರಿಜ್ವಾ಼ನ್‌ ಮತ್ತು ಶಫಿಕ್‌ ಇನ್ನೂ 10 ಬಾಲ್‌ ಇರೋವಾಗ್ಲೆ ಟಾರ್ಗೆಟ್‌ನ ಚೇಸ್‌ ಮಾಡಿದ್ರು.

-masthmagaa.com

Contact Us for Advertisement

Leave a Reply