ಟ್ವಿಟರ್‌ಗೆ ಟಕ್ಕರ್‌ ಕೊಡಲು ಬರಲಿದೆ ಮೆಟಾ ʻಥ್ರೆಡ್‌ʼ!

masthmagaa.com:

ವಿಶ್ವದ ನಂಬರ್‌ ಒನ್‌ ಶ್ರೀಮಂತ ಎಲಾನ್‌ ಮಸ್ಕ್‌ ಅವ್ರ ಒಡೆತನದ ಟ್ವಿಟರ್‌ಗೆ ಕಾಂಪೀಟ್‌ ಮಾಡೋಕೆ ಮೆಟಾ ಮುಖ್ಯಸ್ಥ ಮಾರ್ಕ್‌ ಜುಕರ್‌ಬರ್ಗ್‌ ಸಜ್ಜಾಗಿದ್ದಾರೆ. ಟ್ವಿಟರ್‌ ರೀತಿಯ ಮೈಕ್ರೋಬ್ಲಾಗಿಂಗ್‌ ಸೋಷಿಯಲ್‌ ಮೀಡಿಯಾ ಆ್ಯಪ್ ಪರಿಚಯಿಸೋದಾಗಿ ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಹೇಳಿದೆ. ಈ ಹೊಸ ಆ್ಯಪ್‌ಗೆ ‘ಥ್ರೆಡ್ಸ್’ ಅಂತ ಹೆಸರಿಡಲಾಗಿದ್ದು, ಜುಲೈ 6ರಂದು ಬಿಡುಗಡೆಯಾಗುವ ನಿರೀಕ್ಷೆ ಇದೆ. ಇನ್ಸ್‌ಸ್ಟಾಗ್ರಾಮ್ ಆಧಾರಿತ ಚಾಟಿಂಗ್ ಆ್ಯಪ್ ಇದಾಗಿರಲಿದ್ದು, ಬಳಕೆದಾರರಿಗೆ ಪರಸ್ಪರ ಫಾಲೋ ಮಾಡುವ ಅವಕಾಶ ಇರಲಿದೆ. ಅಂದ್ಹಾಗೆ ಆರಂಭದಲ್ಲಿ ಆ್ಯಪಲ್‌ ಸ್ಟೋರ್‌ನಲ್ಲಿ ಮಾತ್ರ ಲಭ್ಯವಾಗಲಿದೆ ಅಂತ ಗೊತ್ತಾಗಿದೆ. ಆದ್ರೆ ಗೂಗಲ್ ಸ್ಟೋರ್‌ನಲ್ಲಿ ಯಾವಾಗ ಸಿಗಲಿದೆ ಅನ್ನೋದಕ್ಕೆ ಮೆಟಾ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ.

-masthmagaa.com

Contact Us for Advertisement

Leave a Reply