ಬಿಹಾರ ದುರ್ಗಾಪೂಜೆಯಲ್ಲಿ ಕಾಲ್ತುಳಿತ: 3 ಮಂದಿ ಸಾವು

masthmagaa.com:

ದುರ್ಗಾಪೂಜೆ ವೇಳೆ ಕಾಲ್ತುಳಿತಕ್ಕೆ ಸಿಲುಕಿ 3 ಮಂದಿ ಸಾವನ್ನಪ್ಪಿರೋ ಘಟನೆ ಬಿಹಾರದ ಗೋಪಾಲ್‌ಗಂಜ್‌ನಲ್ಲಿ ನಡೆದಿದೆ. ನವರಾತ್ರಿ ಅಂಗವಾಗಿ ಗೋಪಾಲ್‌ಗಂಜ್‌ನಲ್ಲಿ ದುರ್ಗಾಪೂಜೆ ನಡೆಸಲಾಗ್ತಿತ್ತು. ಈ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ಇಬ್ಬರು ಮಹಿಳೆಯರು ಸೇರಿ ಒಂದು ಮಗು ಕಾಲ್ತುಳಿತಕ್ಕೆ ಮೃತಪಟ್ಟಿದ್ದಾರೆ. ಜೊತೆಗೆ ಈ ಕಾಲ್ತುಳಿತದ ವೇಳೆ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯು, ದುರ್ಗಾಪೂಜೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿ, ಜನಸಂಖ್ಯೆಯನ್ನ ಕಂಟ್ರೋಲ್‌ಗೆ ತರಲು ಯಾವುದೇ ಭದ್ರತಾ ನಿಯೋಜನೆಯನ್ನ ಮಾಡದಿರೋ ಕಾರಣದಿಂದ ಸಂಭವಿಸಿದೆ. ಹೀಗಂತ ಗೋಪಾಲ್‌ಗಂಜ್‌ ಜಿಲ್ಲಾ ಮೆಜಿಸ್ಟ್ರೇಟ್‌ ನವಾಲ್‌ ಕಿಶೋರ್‌ ಚೌದರಿ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply