ಗ್ರೌಂಡ್​ನಲ್ಲಿ ಮಾಡೋದೆಲ್ಲಾ ಮಾಡಿ ಕ್ಷಮೆ ಕೇಳೋ ಆಸ್ಟ್ರೇಲಿಯಾ ಆಟಗಾರರು!

masthmagaa.com:

ಭಾರತ-ಆಸ್ಟ್ರೇಲಿಯಾ ನಡುವೆ ನಡೆದ ಸಿಡ್ನಿ ಟೆಸ್ಟ್​ನ 5ನೇ ದಿನ ರಿಷಬ್​ ಪಂತ್ ಬ್ಯಾಟಿಂಗ್ ಮಾಡುವ ವೇಳೆ ಅವರ ಗಾರ್ಡ್ ಅನ್ನು ಡ್ರಿಂಕ್ಸ್​ ಬ್ರೇಕ್ ವೇಳೆ ಸ್ಟೀವ್ ಸ್ಮಿತ್​ ಅಳಿಸಿದ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ದೃಶ್ಯ ವಿಕೆಟ್​ ಕ್ಯಾಮರಾದಲ್ಲಿ ರೆಕಾರ್ಡ್ ಆಗಿತ್ತು. ಆಸ್ಟ್ರೇಲಿಯಾ ಆಟಗಾರರ ಕುತಂತ್ರಕ್ಕೆ ಟೀಂ ಇಂಡಿಯಾದ ಮಾಜಿ ಆಟಗಾರ ಸೆಹ್ವಾಗ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ರು. ಈ ಬಗ್ಗೆ ಈಗ ಮಾತನಾಡಿರುವ ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್, ರಿಷಬ್ ಪಂತ್ ಅವರ ಬ್ಯಾಟಿಂಗ್ ಗಾರ್ಡ್​ ಚೇಂಜ್ ಮಾಡಲು ಸ್ಟೀವ್ ಸ್ಮಿತ್ ಪ್ರಯತ್ನಿಸಿದ್ದಲ್ಲ. ಅದು ಶ್ಯಾಡೋ ಪ್ರಾಕ್ಟಿಸ್ ಅಂತ ಹೇಳಿ ಸಮರ್ಥನೆ ಕೊಟ್ಟಿದ್ದಾರೆ. ಮತ್ತೊಂದುಕಡೆ ಆರ್. ಅಶ್ವಿನ್ ಬ್ಯಾಟಿಂಗ್ ಮಾಡುವ ವೇಳೆ ಸ್ವತಃ ಟಿಮ್ ಪೈನ್​ ಕೂಡ ಸ್ಲೆಜಿಂಗ್ ಮಾಡಿದ್ರು. ಈ ಬಗ್ಗೆ ಅಶ್ವಿನ್ ಬಳಿ ಪೈನ್ ಈಗ ಕ್ಷಮೆ ಕೇಳಿದ್ದಾರೆ. ಇನ್ನು ಮೊಹಮ್ಮದ್​ ಸಿರಾಜ್​ರನ್ನ ಕೆಲ ಪ್ರೇಕ್ಷಕರು ಜನಾಂಗೀಯವಾಗಿ ನಿಂದಿಸಿದ್ದಕ್ಕೆ ಡೇವಿಡ್ ವಾರ್ನರ್ ಕ್ಷಮೆ ಕೇಳಿದ್ದಾರೆ. ಇಲ್ಲಿ ಒಂದಂತೂ ಸ್ಪಷ್ಟ, ಈ ಆಸ್ಟ್ರೇಲಿಯಾ ಆಟಗಾರರು ಮ್ಯಾಚ್​ ಗೆಲ್ಲಲು ಯಾವ ಹಂತಕ್ಕೆ ಬೇಕಾದ್ರೂ ಹೋಗ್ತಾರೆ. ಮ್ಯಾಚ್​ ಮುಗಿದ ಬಳಿಕ ಹಾಗಾಗಿದ್ದು ತಪ್ಪು, ಹೀಗಾಗಿದ್ದು ತಪ್ಪು. ನಮ್ಮನ್ನ ಕ್ಷಮಿಸಿ ಅಂತ ಕೇಳ್ತಾರೆ. ನಿಮಗೆ ನೆನಪಿರಬಹುದು ಇದೇ ಸ್ಟೀವ್ ಸ್ಮಿತ್ ಬಾಲ್ ಟ್ಯಾಂಪರಿಂಗ್ ಮಾಡ್ತಾ ಸಿಕ್ಕಿಬಿದ್ದು ಒಂದುವರ್ಷ ನಿಷೇಧಕ್ಕೆ ಒಳಗಾಗಿದ್ದರು. ಆಮೇಲೆ ಪ್ರೆಸ್​ ಕಾನ್ಫರೆನ್ಸ್ ನಡೆಸಿ ಗಳಗಳನೆ ಅತ್ತಿದ್ರು. ಅವರಿಗೆ ಕೆಟ್ಟ ಮೇಲೂ ಬುದ್ಧಿ ಬಂದಂತೆ ಕಾಣ್ತಿಲ್ಲ.

-masthmagaa.com

Contact Us for Advertisement

Leave a Reply