ಗಾಜಾದಲ್ಲಿ ಹಿರೋಷಿಮಾ ಮತ್ತು ನಾಗಸಾಕಿಯಂತೆ ಸ್ಫೋಟವಾಗ್ಬೇಕು: ಅಮೆರಿಕ

masthmagaa.com:

ಇನ್ನೊಂದ್ಕಡೆ ಗಾಜಾ ಯುದ್ಧ ವಿಚಾರವಾಗಿ ಅಮೆರಿಕ ಸಂಸತ್ತಿನಲ್ಲಿ ಆಡಿದ ಮಾತು ತೀವ್ರ ವಿವಾದಕ್ಕೀಡಾಗಿದೆ. ಅಮೆರಿಕದ ಸಂಸದರಾದ ಟಿಮ್‌ ವಾಲ್ಬರ್ಗ್‌ ಅವ್ರು ಗಾಜಾದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನ ಉಪಯೋಗಿಸಿ ಸ್ಫೋಟ ನಡೆಸ್ಬೇಕು ಅಂತೇಳಿದ್ದಾರೆ. ಅದು ಕೂಡ ಈ ಹಿಂದೆ ಜಪಾನ್‌ನ ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ನಡೆದ ಸ್ಫೋಟದಂತಿರ್ಬೇಕು ಅಂತೇಳಿ ಪೇಚಿಗೆ ಸಿಲುಕಿಕೊಂಡಿದ್ದಾರೆ. ಇವ್ರ ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಇನ್ನು ಇವ್ರು ಈ ರೀತಿ ಹೇಳಿಕೆ ನೀಡಿರೋ ವಿಡಿಯೋ ಕ್ಲಿಪ್‌ನಲ್ಲಿ, ಸಂಸದ ವಾಲ್ಬರ್ಗ್‌ ಅವ್ರು ಗಾಜಾದಲ್ಲಿ ಮಾನವೀಯ ನೆರವು ನೀಡೋದ್ಕಿಂತ, ಇಸ್ರೇಲ್‌ಗೆ ಆದ್ಯತೆ ನೀಡಿ ಅಮೆರಿಕ ತನ್ನ ಬೆಂಬಲವನ್ನ ಹೆಚ್ಚಿಸ್ಬೇಕು ಅಂತೇಳಿದ್ದಾರೆ. ಜೊತೆಗೆ ರಷ್ಯಾ ಜೊತೆಗಿನ ಯುದ್ಧದಲ್ಲಿ ಯುಕ್ರೇನ್‌ಗೂ ಬೆಂಬಲ ಸೂಚಿಸಿದ್ದಾರೆ. ನಂತ್ರ ಈ ಬಗ್ಗೆ ಸಮರ್ಥಿಸಿಕೊಂಡಿರೋ ವಾಲ್ಬರ್ಗ್‌, ʻನನ್ನ ಹೇಳಿಕೆಯನ್ನ ತಿರುಚಲಾಗಿದೆ. ನನ್ನ ಉದ್ದೇಶ ಇಸ್ರೇಲ್‌ ಮತ್ತು ಯುಕ್ರೇನ್‌ ತಮ್ಮ ಯುದ್ಧದಲ್ಲಿ ಜಯಗಳಿಸೋದು ಅಷ್ಟೆʼ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply