ವಾರಾಂತ್ಯದಲ್ಲೂ ಮಾರ್ಕೆಟ್‌ ನೀರಸ! ಬಾಂಡ್‌ ಏಟಿನಿಂದ್ಲೂ ಗಾಯ!

masthmagaa.com:

ಈ ವಾರ ಪೂರ್ತಿ ಭಾರತದ ಷೇರ್‌ ಮಾರ್ಕೆಟ್‌ ದೊಡ್ಡ ಇಂಪ್ಯಾಕ್ಟ್‌ ಮಾಡುವಲ್ಲಿ ಫೇಲ್‌ ಆಗಿದೆ. ವಾರದ ಕೊನೆಯ ಟ್ರೇಡಿಂಗ್‌ ದಿನ, ಶುಕ್ರವಾರ ಮಹಿಂದ್ರಾ ಅಂಡ್‌ ಮಹಿಂದ್ರಾ, ರಿಲಯಾನ್ಸ್‌, ಇನ್ಫೋಸಿಸ್‌, L&T ಹಾಗೂ ಟಾಟಾ ಮೋಟರ್ಸ್‌ಗಳ ಭಾರಕ್ಕೆ ಮಾರ್ಕೆಟ್‌ ಜೋತು ಬಿದ್ದಿದೆ. ಮಾರ್ಕೆಟ್‌ ಇವತ್ತು ತನ್ನ ಇಂಟ್ರಾಡೇನ ಕನಿಷ್ಟ ಮಟ್ಟದಿಂದ ಮಾತ್ರ ರಿಕವರ್‌ ಆಗೋಕೆ ಸಾಧ್ಯ ಆಗಿದೆ. ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ 454 ಪಾಯಿಂಟ್ಸ್‌ ಕಳ್ಕೊಂಡು 72,643ಕ್ಕೆ ಇಳಿದ್ರೆ, ನಿಫ್ಟಿ 196 ಪಾಯಿಂಟ್ಸ್‌ ಇಳಿದು 22,023ಕ್ಕೆ ತಲುಪಿದೆ. ಇನ್ಫೋಸಿಸ್‌ ಷೇರು ದರ 1.32% ಇಳಿದು ₹1,631ಕ್ಕೆ ರೀಚ್‌ ಆಗಿದೆ. ರಿಲಯಾನ್ಸ್‌ ಇಂಡಸ್ಟ್ರೀಸ್‌ 0.87% ಇಳಿದು ₹2,838ಕ್ಕೆ ತಲುಪಿದೆ. ಮಹಿಂದ್ರಾ ಅಂಡ್‌ ಮಹಿಂದ್ರಾ ಬರೋಬ್ಬರಿ 4.99% ಇಳಿದು ₹1,796ಕ್ಕೆ ರೀಚ್‌ ಆಗಿದೆ. ಕಂಪನಿಗೆ ಚುನಾವಣಾ ಬಾಂಡ್‌ ಖರೀದಿಯ ಬಿಸಿ ತಟ್ಟಿರೋ ಹಾಗೆ ಕಾಣ್ತಿದೆ. ಇನ್ನು ಬಾಂಡ್‌ ಖರೀಧಿಸಿರೋ ಒಲೆಕ್ಟ್ರಾ ಗ್ರೀನ್‌ಟೆಕ್‌ ಷೇರುಗಳು ಕುಸಿದಿವೆ, ಮುಖ್ಯವಾಗಿ SBI ಷೇರು ಮೌಲ್ಯ ₹790ರಿಂದ ₹747ಕ್ಕೆ ಕುಸಿದಿದೆ.. ಮಾರ್ಚ್‌ 7ರಿಂದ ಕುಸಿತಾನೇ ಇದೆ. ಇನ್ನುಳಿದಂತೆ ಪೆಟ್ರೋಲ್‌ ಡೀಸೆಲ್‌ ಬೆಲೆ ಇಳಿಕೆಯಾದ ಬೆನ್ನಲ್ಲೇ ತೈಲ ಕಂಪನಿಗಳು ರೇಟಿಂಗ್‌ ಕಳೆದುಕೊಳ್ಳೋ ಭೀತಿಯಲ್ಲಿವೆ. HPCL, BPCL ಹಾಗೂ IOCಗಳ ರೇಟಿಂಗ್‌ ಕಡಿಮೆಯಾಗ್ಬೋದು ಅಂತೇಳಲಾಗ್ತಿದೆ. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ 04 ಪೈಸೆ ಇಳಿಕೆ ಕಂಡು 82.88 ಆಗಿದೆ. (82 ರೂಪಾಯಿ 88 ಪೈಸೆ).

-masthmagaa.com

Contact Us for Advertisement

Leave a Reply