ವಾರಾಂತ್ಯದಲ್ಲಿ ಲಾಸ್‌ಗಳನ್ನ ರಿಕವರ್‌ ಮಾಡ್ಕೊಂಡ ಮಾರ್ಕೆಟ್!

masthmagaa.com:

ವಾರಾಂತ್ಯದಲ್ಲಿ ಭಾರತದ ಸ್ಟಾಕ್‌ ಮಾರ್ಕೆಟ್‌ ಒಂದಷ್ಟು ಲಾಸ್‌ಗಳನ್ನ ರಿಕವರ್‌ ಮಾಡ್ಕೊಂಡಿದೆ. 2024ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದ ರಿಪೋರ್ಟ್‌ ರಿಲೀಸ್‌ ಮಾಡಿದ ವಿಪ್ರೋ, ಬಜಾಜ್‌ ಆಟೋ ಸೇರಿ ಹಲವು ಕಂಪನಿಗಳು ಮಾರ್ಕೆಟ್‌ಗೆ ಬೂಸ್ಟ್‌ ನೀಡಿವೆ. ವಿಪ್ರೋ, HDFC AMC ಸೇರಿ ಸುಮಾರು 15 ಕಂಪನಿಗಳು ಶುಕ್ರವಾರ ತಮ್ಮ ಅರ್ನಿಂಗ್‌ ರಿಪೋರ್ಟ್‌ ನೀಡಿವೆ. ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ 600 ಪಾಯಿಂಟ್‌ ಗಳಿಸಿ 73,088ಕ್ಕೆ ರೀಚ್‌ ಆದ್ರೆ, ನಿಫ್ಟಿ 151 ಪಾಯಿಂಟ್ಸ್‌ ಗಳಿಸಿ 22,147ಕ್ಕೆ ತಲುಪಿದೆ. ವಿಪ್ರೋ ಷೇರುಗಳ ಬೆಲೆಯಲ್ಲಿ 1.74% ಜಾಸ್ತಿಯಾಗಿ ₹452.10ಗೆ ತಲುಪಿದೆ.

-masthmagaa.com

Contact Us for Advertisement

Leave a Reply