ವರ್ಷದ ನಾಲ್ಕನೇ ದಿನ ಮಾರ್ಕೆಟ್‌ಗೆ HDFC ಬ್ಯಾಂಕ್‌ ಬಲ!

masthmagaa.com:

ನೂತನ ಆರ್ಥಿಕ ವರ್ಷದ ನಾಲ್ಕನೇ ದಿನ ಭಾರತದ ಸ್ಟಾಕ್‌ ಮಾರ್ಕೆಟ್‌ ದಾಖಲೆ ಗರಿಷ್ಠ ಮಟ್ಟ ತಲುಪಿದೆ. 4-4-24ರ ಫ್ಯಾನ್ಸಿ ಡೇಟ್‌ನಲ್ಲಿ ಹೂಡಿಕೆದಾರರು ಭರ್ಜರಿ ಹೂಡಿಕೆ ಮಾಡಿದ್ದಾರೆ. ಮುಖ್ಯವಾಗಿ ಗುರುವಾರ ಬ್ಯಾಂಕಿಂಗ್‌ ಸೆಕ್ಟರ್‌ ಷೇರುಗಳು ಮಾರ್ಕೆಟ್‌ಗೆ ಬಲ ತುಂಬಿವೆ. ಕಾರಣ ಇಂದು ಬೆಳಿಗ್ಗೆ HDFC ಬ್ಯಾಂಕ್‌ ತನ್ನ ನಾಲ್ಕನೇ ಕ್ವಾರ್ಟರ್‌ನ ಬ್ಯುಸಿನೆಸ್‌ ಗ್ರೋಥ್ ರಿಪೋರ್ಟ್‌ ರಿಲೀಸ್‌ ಮಾಡಿತ್ತು. ಬ್ಯಾಂಕ್‌ನಲ್ಲಿನ ಡೆಪಾಸಿಟ್ಸ್‌ YoY 26.5% ಜಾಸ್ತಿಯಾಗಿ ₹23.8 ಲಕ್ಷ ಕೋಟಿಗೆ ತಲುಪಿದೆ. ಬ್ಯಾಂಕ್‌ನ ಒಟ್ಟು ಮುಂಗಡಗಳು YoY ಬರೋಬ್ಬರಿ 55.4% ಹೆಚ್ಚಾಗಿ ₹25.08 ಲಕ್ಷ ಕೋಟಿಗೆ ತಲುಪಿದೆ. ಈ ರಿಪೋರ್ಟ್‌ನ ಬೂಸ್ಟ್‌ನಿಂದಾಗಿ ಬ್ಯಾಂಕ್‌ ನಿಫ್ಟಿ ಇಂಡೆಕ್ಸ್‌ 351 ಪಾಯಿಂಟ್ಸ್‌ ಗಳಿಗೆ ಕಂಡಿದೆ. ದಿನದ ವಹಿವಾಟಿನ ಅಂತ್ಯಕ್ಕೆ ಬೆಂಚ್‌ ಮಾರ್ಕ್‌ ಇಂಡೆಕ್ಸ್‌ಗಳಾದ ಸೆನ್ಸೆಕ್ಸ್‌ 351 ಪಾಯಿಂಟ್ಸ್‌ ಏರಿಕೆಯಾಗಿ 74,228ಕ್ಕೆ ತಲುಪಿದೆ. ಇನ್ನು ನಿಫ್ಟಿ 80 ಪಾಯಿಂಟ್ಸ್‌ ಗಳಿಸಿ 22,515ಕ್ಕೆ ಏರಿಕೆಯಾಗಿದೆ. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ 9 ಪೈಸೆ ಏರಿಕೆಯಾಗಿ 83.44 ಆಗಿದೆ. (83 ರೂಪಾಯಿ 44 ಪೈಸೆ).

-masthmagaa.com

Contact Us for Advertisement

Leave a Reply