ಷೇರು ಮಾರುಕಟ್ಟೆ ಫ್ಲಾಟ್‌; HDFCಗೆ 7 ದಿನದಲ್ಲಿ 7% ಲಾಭ!

masthmagaa.com:

RBI ದರಗಳು ಯಥಾಸ್ಥಿತಿಯಲ್ಲಿ ಕಂಟಿನ್ಯೂ ಆಗಿರೋದ್ರಿಂದ ಭಾರತದ ಷೇರ್‌ ಮಾರ್ಕೆಟ್‌ ಕೂಡ ಯಥಾ ಸ್ಥಿತಿಯಲ್ಲಿ ಮುಂದುವರಿದಿದೆ. ಅಂದ್ರೆ ಫ್ಲಾಟ್‌ ಆಗಿ ದಿನದ ವಹಿವಾಟು ಮುಗಿಸಿದೆ. ಆದ್ರೆ ಮಿಡ್‌ ಕ್ಯಾಪ್‌ ಸೆಗ್‌ಮೆಂಟ್‌ ಮಾತ್ರ ದಶಕ ಬಾರಿಸಿ, ಸತತ 10ನೇ ದಿನಗಳ ಟ್ರೇಡಿಂಗ್‌ನಲ್ಲಿ ಲಾಭ ಗಳಿಸಿದೆ.‌ ಎರಡನೇ ದಿನವೂ HDFCಯ ಮೊಮೆಂಟಮ್ ಬ್ಯಾಂಕ್‌ ನಿಫ್ಟಿ ಇಂಡೆಕ್ಸ್‌ಗೆ ಶಕ್ತಿ ತುಂಬಿದೆ. ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ ಹೇಗೋ ಕಷ್ಟ ಪಟ್ಟು 21 ಪಾಯಿಂಟ್‌ಗಳನ್ನ ಬುಟ್ಟಿಗೆ ಹಾಕೊಂಡು 74,248ಕ್ಕೆ ತಲುಪಿದೆ. ನಿಫ್ಟಿ ಒಂದೇ ಒಂದು ಪಾಯಿಂಟ್ಸ್ ಕಳ್ಕೊಂಡು 22,514ಕ್ಕೆ ಇಳಿದಿದೆ.‌ HDFC ಬ್ಯಾಂಕ್‌ 1.47% ಗಳಿಕೆ ಕಂಡು ₹1,550ರ ಸುತ್ತ ಟ್ರೇಡಿಂಗ್‌ ನಡೆಸಿದೆ. ಸತತ 7 ಸೆಷನ್‌ಗಳಿಂದ HDFC ಲಾಭದಲ್ಲಿದೆ. ಏಳು ದಿನದಲ್ಲಿ ಸುಮಾರು 7% ಲಾಭ ಗಳಿಸಿದೆ.

-masthmagaa.com

Contact Us for Advertisement

Leave a Reply