ಮಾರ್ಕೆಟ್‌ಗಳಿಗೆ ಆಟೋ ಸೆಕ್ಟರ್‌ನ ಬೂಸ್ಟ್:‌ ಮಾರುತಿ ಟಾಪ್‌ ಗೇನರ್

masthmagaa.com:

ವಾರದ ಮೊದಲ ದಿನ ಭಾರತದ ಸ್ಟಾಕ್‌ ಮಾರ್ಕೆಟ್‌ ದಾಖಲೆ ಗಳಿಗೆ ಕಂಡಿದೆ. ಇದೇ ಮೊದಲ ಬಾರಿಗೆ ಭಾರತ್‌ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ಲಿಸ್ಟ್‌ ಆಗಿರೋ ಕಂಪನಿಗಳು ₹400 ಲಕ್ಷ ಕೋಟಿಯ ಮಾರುಕಟ್ಟೆ ಮೌಲ್ಯ ತಲುಪಿವೆ. ಫೆಡರೇಷನ್‌ ಆಫ್‌ ಅಟೊಮೊಬೈಲ್‌ ಡೀಲರ್ಸ್‌ ಅಸೋಸಿಯೇಶನ್‌ ರಿಪೋರ್ಟ್‌ನಿಂದಾಗಿ ಅಟೊಮೊಬೈಲ್‌ ಷೇರುಗಳಿಗೆ ಬೂಸ್ಟ್‌ ಸಿಕ್ಕಿದೆ. ಐಶರ್‌ ಮೋಟಾರ್ಸ್‌ ಹಾಗೂ ಮಾರುತಿ ಕಂಪನಿಗಳು ಟಾಪಾ ಗೇನರ್‌ ಲಿಸ್ಟ್‌ಗೆ ಬಂದಿವೆ. ಇನ್ನು ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ 494 ಪಾಯಿಂಟ್ಸ್‌ ಗಳಿಸಿ ₹74,743ಕ್ಕೆ ರೀಚ್‌ ಆದ್ರೆ, ನಿಫ್ಟಿ 153 ಪಾಯಿಂಡ್ಸ್‌ ಗಳಿಸಿ 22,666ಕ್ಕೆ ರೀಚ್‌ ಆಗಿದೆ. ಡಾಲರ್‌ ಮುಂದೆ ರೂಪಾಯಿ ಮೌಲ್ಯದಲ್ಲಿ ಯಾವುದೇ ಬದಲಾವಣೆ ಇಲ್ಲದೇ 83 ರೂಪಾಯಿ 31 ಪೈಸೆಯಲ್ಲಿ ಮುಂದುವರೆದಿದೆ.(83 ರೂಪಾಯಿ 31 ಪೈಸೆ).

-masthmagaa.com

Contact Us for Advertisement

Leave a Reply