ಷೇರುಪೇಟೆ: ಅಮೆರಿಕದ ಹಣದುಬ್ಬರ ಸಂಖ್ಯೆಯಿಂದ ಭಾರೀ ಪೆಟ್ಟು!

masthmagaa.com:

ವಾರದ ಮೊದಲ ದಿನ ಚೆನ್ನಾಗಿ ಪರ್ಫಾಮೆನ್ಸ್‌ ನೀಡಿದ್ದ ಭಾರತೀಯ ಷೇರು ಮಾರುಕಟ್ಟೆ ಹೊಸ ವರ್ಷದ ಆರಂಭ…ಯುಗಾದಿಯಂದು ನೀರಸ ಫಲಿತಾಂಶ ನೀಡಿದೆ. ಅಮೆರಿಕದ ಹಣದುಬ್ಬರ ಸಂಖ್ಯೆ ಮೇಲೆ ಕಣ್ಣಿಟ್ಟ ಹೂಡಿಕೆದಾರರು, ಪ್ರಾಫಿಟ್‌ ಬುಕಿಂಗ್‌ ದಾರಿ ಹಿಡಿದಿದ್ದಾರೆ. ಅಮೆರಿಕದ ಸೆಂಟ್ರಲ್‌ ಬ್ಯಾಂಕ್‌ನ ದರ ಕಡಿತ ವೀಕ್‌ ಆಗಿರೋದ್ರಿಂದ…ಭಾರತೀಯ ಷೇರು ಮಾರುಕಟ್ಟೆ ಮೇಲೆ ದಿಢೀರ್‌ ಪರಿಣಾಮ ಬೀರಿದೆ. ದಿನದ ವಹಿವಾಟಿನ ಅಂತ್ಯಕ್ಕೆ ಬೆಂಚ್‌ ಮಾರ್ಕ್‌ ಇಂಡೆಕ್ಸ್‌ಗಳಾದ ಸೆನ್ಸೆಕ್ಸ್‌ 59 ಪಾಯಿಂಟ್ಸ್‌ ಕಡಿಮೆಯಾಗಿ 74,683.70ಕ್ಕೆ ತಲುಪಿದೆ. ಇನ್ನು ನಿಫ್ಟಿ 24 ಪಾಯಿಂಟ್ಸ್‌ ಕಳೆದುಕೊಂಡು 22,642.75ಕ್ಕೆ ಇಳಿಕೆಯಾಗಿದೆ. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ 11 ಪೈಸೆ ಏರಿಕೆಯಾಗಿ 83.20 ಆಗಿದೆ. (83 ರೂಪಾಯಿ 20 ಪೈಸೆ).

-masthmagaa.com

Contact Us for Advertisement

Leave a Reply