ಷೇರುಪೇಟೆ: 2 ಲಕ್ಷ ಕೋಟಿಗೂ ಅಧಿಕ ಲಾಭ ಗಳಿಸಿದ ಹೂಡಿಕೆದಾರರು

masthmagaa.com:

ಯುಗಾದಿಯಂದು ಹಿನ್ನಡೆ ಕಂಡಿದ್ದ ಭಾರತೀಯ ಷೇರುಪೇಟೆಗೆ ಇಂದು ದೇಶೀಯ ಕಂಪನಿಗಳಿಂದ ಭಾರೀ ಬೂಸ್ಟ್‌ ಸಿಕ್ಕಿದೆ. ಅಮೆರಿಕದ ಸೆಂಟ್ರಲ್‌ ಬ್ಯಾಂಕ್‌ನ ದರ ಕಡಿತ ಮೇಲೆ ಹೂಡಿಕೆದಾರರು ಕಣ್ಣಾಡಿಸ್ತಿದ್ರೂ, ಭಾರತದ ಸ್ಟಾಕ್‌ಗಳು ಚೆನ್ನಾಗಿ ವಹಿವಾಟು ನಡೆಸಿದೆ. ಹೂಡಿಕೆದಾರರು ದಿನಕ್ಕೆ 2 ಲಕ್ಷ ಕೋಟಿಗೂ ಅಧಿಕ ಲಾಭ ಗಳಿಸಿದ್ದಾರೆ. ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ 354 ಪಾಯಿಂಟ್ಸ್‌ ಅಥ್ವಾ 0.47% ಏರಿಕೆಯಾಗಿ 75,038.15ಕ್ಕೆ ತಲುಪಿದೆ. ಇನ್ನು ನಿಫ್ಟಿ 111 ಪಾಯಿಂಟ್ಸ್‌ ಅಥ್ವಾ 0.49% ಗಳಿಸಿ 22,753.80ಕ್ಕೆ ಏರಿಕೆಯಾಗಿದೆ. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ 12 ಪೈಸೆ ಏರಿಕೆಯಾಗಿ 83.19 ಆಗಿದೆ. (83 ರೂಪಾಯಿ 19 ಪೈಸೆ).

-masthmagaa.com

Contact Us for Advertisement

Leave a Reply