ಷೇರುಪೇಟೆ: ಭಾರೀ ಸೆಲ್‌-ಆಫ್‌, ಬೇರಿಷ್‌ ಆಗಿ ವಹಿವಾಟು ಅಂತ್ಯ

masthmagaa.com:

ಏಪ್ರಿಲ್‌ 10ರಂದು ಹಸಿರುಪಟ್ಟಿಯಲ್ಲಿ ಕಾಣಿಸಿಕೊಂಡ ಷೇರುಪೇಟಿ ಇಂದು ಬೇರಿಷ್‌ ಆಗಿ ವಹಿವಾಟು ನಡೆಸಿದೆ. ಪ್ರಮುಖವಾಗಿ ವಿದೇಶಿ ಹೂಡಿಕೆದಾರರಿಂದ ಎಲ್ಲಾ ಸೆಕ್ಟರ್‌ಗಳಲ್ಲಿಯೂ ಭಾರೀ ಸೆಲ್‌-ಆಫ್‌ ಆಗಿದ್ದು, ಇದ್ರಲ್ಲಿ ಟಾಪ್‌ ಕಂಪನಿಗಳು ಇವೆ. ಹೀಗಾಗಿ ವಾರದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ 793 ಪಾಯಿಂಟ್ಸ್‌ ಅಥ್ವಾ 1.06% ಕಡಿಮೆಯಾಗಿ 74,244.90ಕ್ಕೆ ತಲುಪಿದೆ. ಇನ್ನು ನಿಫ್ಟಿ 234 ಪಾಯಿಂಟ್ಸ್‌ ಅಥ್ವಾ 1.03% ಕಳೆದುಕೊಂಡು 22,519.40ಕ್ಕೆ ಇಳಿಕೆಯಾಗಿದೆ. ಒಂದೇ ದಿನದಲ್ಲಿ ಹೂಡಿಕೆದಾರರು ಸುಮಾರು 2 ಲಕ್ಷ ಕೋಟಿ ರೂಪಾಯಿಗೂ ಅಧಿಕ ನಷ್ಟ ಮಾಡ್ಕೊಂಡಿದ್ದಾರೆ. ಆದ್ರೆ ಸ್ಮಾಲ್‌ಕ್ಯಾಪ್‌ ಮತ್ತು ಮಿಡ್‌ಕ್ಯಾಪ್‌ ಕಂಪನಿಗಳು ತಕ್ಕಮಟ್ಟಿಗೆ ಬ್ಯಾಲೆನ್ಸ್ಡ್‌ ಆಗಿ ವಹಿವಾಟು ನಡೆಸಿವೆ. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ 12 ಪೈಸೆ ಕಡಿಮೆಯಾಗಿ 83.43 ಆಗಿದೆ. (83 ರೂಪಾಯಿ 43 ಪೈಸೆ).

-masthmagaa.com

Contact Us for Advertisement

Leave a Reply