ಮಿಡ್ಲ್‌ ಈಸ್ಟ್‌ ಕಾವಿನಿಂದ ಭಾರತದ ಷೇರ್‌ ಮಾರ್ಕೆಟ್‌ಗೆ ಬಿಸಿ!

masthmagaa.com:

ಮಿಡ್ಲ್‌ ಈಸ್ಟ್‌ನಲ್ಲಿ ಇಸ್ರೇಲ್‌ ಮೇಲೆ ಇರಾನ್‌ ಮಾಡಿದ ದಾಳಿಯ ಬಿಸಿ ಭಾರತದ ಶೇರ್‌ ಮಾರ್ಕೆಟ್‌ಗೂ ತಟ್ಟಿದೆ. ಈ ಜಿಯೋಪೊಲಿಟಿಕಲ್‌ ಟೆನ್ಶನ್‌ನಿಂದಾಗಿ 2 ವಾರಗಳ ಕನಿಷ್ಟ ಮಟ್ಟಕ್ಕೆ ಶೇರ್‌ ಮಾರ್ಕೆಟ್‌ ಕುಸಿದಿದೆ. ಸೋಮವಾರ ಒಂದೇ ದಿನ ಸೆನ್ಸೆಕ್ಸ್‌ ಬರೋಬ್ಬರಿ 845 ಪಾಯಿಂಟ್‌ಗಳನ್ನ ಕಳೆದುಕೊಂಡಿದೆ. ಆ ಮೂಲಕ ಹೂಡಿಕೆದಾರರ ಸುಮಾರು ₹5 ಲಕ್ಷ ಕೋಟಿ ಮಿಡ್ಲ್‌ ಈಸ್ಟ್‌ನ ಸಮುದ್ರಕ್ಕೆ ಮುಳುಗಿದಂತಾಗಿದೆ. ಸೆನ್ಸೆಕ್ಸ್‌ 73,400ಕ್ಕೆ ತಲುಪಿದ್ರೆ ಅತ್ತ ನಿಫ್ಟಿ 242 ಪಾಯಿಂಟ್‌ ಇಳಿದು 22,278ಕ್ಕೆ ಕುಸಿದಿದೆ. ಮಾರ್ಕೆಟ್‌ ಕುಸಿತಕ್ಕೆ ಅಮೆರಿಕದ ನಿರೀಕ್ಷೆಗಿಂತ ಹೆಚ್ಚಿನ ಹಣದುಬ್ಬರವೂ ಕಾರಣ ಅಂತ ವಿಶ್ಲೇಷಿಸಲಾಗ್ತಿದೆ.

-masthmagaa.com

Contact Us for Advertisement

Leave a Reply