ಷೇರುಪೇಟೆ: ಪ್ರಮುಖ ಬ್ಯಾಂಕ್‌ಗಳ ಷೇರು ಕುಸಿದು ಮಾರ್ಕೆಟ್‌ಗೆ ಹೊಡೆತ!

masthmagaa.com:

ಸತತ ಮೂರು ಸೆಷನ್‌ಗಳಲ್ಲಿ ನಷ್ಟ ಮಾಡ್ಕೊಂಡಿದ್ದ ಷೇರುಪೇಟೆಯ ಟ್ರೆಂಡ್‌ ಇವತ್ತೂ ಕಂಟಿನ್ಯೂ ಆಗಿದೆ. ಹೆವಿವೈಟ್‌ ಬ್ಯಾಂಕ್‌ಗಳಾದ HDFC, ICICI ಮತ್ತು ಆಕ್ಸಿಸ್‌ ಬ್ಯಾಂಕ್‌ನ ಷೇರುಗಳು ನಷ್ಟ ಅನುಭವಿಸಿ ಷೇರುಪೇಟೆ ಮೇಲೆ ನೆಗೇಟಿವ್‌ ಪರಿಣಾಮ ಬೀರಿದೆ. ಸೆನ್ಸೆಕ್ಸ್‌ನ ಕೇವಲ ನಾಲ್ಕು ಸ್ಟಾಕ್‌ಗಳು, ಏರ್ಟೆಲ್‌, ಪವರ್‌ ಗ್ರಿಡ್‌, ಇನ್ಫೋಸಿಸ್‌ ಮತ್ತು ಲಾರ್ಸೆನ್‌ & ಟ್ಯುಬ್ರೊ ಮಾತ್ರ ಹಸಿರುಪಟ್ಟಿಯಲ್ಲಿ ಉಳಿದಿದೆ. ದಿನದ ವಹಿವಾಟಿನ ಅಂತ್ಯಕ್ಕೆ ಬೆಂಚ್‌ ಮಾರ್ಕ್‌ ಇಂಡೆಕ್ಸ್‌ಗಳಾದ ಸೆನ್ಸೆಕ್ಸ್‌ 455 ಪಾಯಿಂಟ್ಸ್‌ ಕಡಿಮೆಯಾಗಿ 72,488.99ಕ್ಕೆ ತಲುಪಿದೆ. ಇನ್ನು ನಿಫ್ಟಿ 152 ಪಾಯಿಂಟ್ಸ್‌ ಕಳೆದುಕೊಂಡು 21,995.85ಕ್ಕೆ ಇಳಿಕೆಯಾಗಿದೆ. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ 06 ಪೈಸೆ ಏರಿಕೆಯಾಗಿ 83.55 ಆಗಿದೆ. (83 ರೂಪಾಯಿ 55 ಪೈಸೆ).

-masthmagaa.com

Contact Us for Advertisement

Leave a Reply