ಷೇರುಪೇಟೆ: ಭಾರಿ ಸೆಲ್‌-ಆಫ್‌, ಕೆಂಪು ಪಟ್ಟಿಯಲ್ಲಿ ಕೊನೆ!

masthmagaa.com:

ವಾರದ ಮೊದಲ ದಿನ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡ ಷೇರು ಮಾರುಕಟ್ಟೆ, ಎರಡನೇ ಸೆಷನ್‌ನಲ್ಲಿ ಕೆಂಪು ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ದೇಶಿಯ ಮಾರುಕಟ್ಟೆ ಭಾರೀ ಪ್ರಮಾಣದಲ್ಲಿ ಸೆಲ್‌-ಆಫ್‌ ಅನುಭವಿಸಿ ಕುಸಿತ ಕಂಡಿದೆ. ಪ್ರಮುಖವಾಗಿ ಐಟಿ, ಟೆಕ್‌, FMCG, ಆಯಿಲ್‌ & ಗ್ಯಾಸ್‌, ಪವರ್‌ PSU ಮತ್ತು ಟೆಲಿಕಾಮ್‌ಗಳ ಷೇರುಗಳಿಗೆ ಭಾರೀ ಹೊಡೆತ ಬಿದ್ದಿದೆ. ಪರಿಣಾಮ ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ ಬರೋಬ್ಬರಿ 736 ಪಾಯಿಂಟ್ಸ್‌ ಅಥ್ವಾ 1.01% ಕಳೆದುಕೊಂಡು 72,012.05ಕ್ಕೆ ಇಳಿಕೆಯಾಗಿದೆ. ಇನ್ನು ನಿಫ್ಟಿ 238 ಪಾಯಿಂಟ್ಸ್‌ ಅಥ್ವಾ 1.08% ಕಳೆದುಕೊಂಡು 21,817.45ಕ್ಕೆ ಇಳಿಕೆಯಾಗಿದೆ. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ 14 ಪೈಸೆ ಇಳಿಕೆ ಕಂಡು 83.04 ಆಗಿದೆ.

-masthmagaa.com

Contact Us for Advertisement

Leave a Reply