ಷೇರುಪೇಟೆ: ಅಮೆರಿಕ ಸೆಂಟ್ರಲ್‌ ಬ್ಯಾಂಕ್‌ನಿಂದ ಮಾರುಕಟ್ಟೆಗೆ ಜೀವಕಳೆ!

masthmagaa.com:

ವಾರದ ನಾಲ್ಕನೇ ದಿನ ಷೇರುಮಾರುಕಟ್ಟೆ ಗಮನಾರ್ಹ ಲಾಭ ಗಳಿಸಿದ್ದು, ಉತ್ತಮ ಪರ್ಫಾಮೆನ್ಸ್‌ ನೀಡಿದೆ. ಅಮೆರಿಕದ ಸೆಂಟ್ರಲ್‌ ಬ್ಯಾಂಕ್‌ ತನ್ನ ಬಡ್ಡಿದರ ಕಡಿಮೆ ಮಾಡುತ್ತೆ ಅನ್ನೋ ಪಾಸಿಟಿವ್‌ ಸೈನ್‌ ನೀಡಿದ್ದು…ಷೇರುಮಾರುಕಟ್ಟೆಗೆ ಜೀವಕಳೆ ತುಂಬಿದೆ. ಸೆಂಟ್ರಲ್‌ ಬ್ಯಾಂಕ್‌ ಬಡ್ಡಿದರ ಕಡಿಮೆ ಮಾಡೋದ್ರಿಂದ ಮಾರುಕಟ್ಟೆಗೆ ಹಣದ ಹರಿವು ಜಾಸ್ತಿಯಾಗಲಿದೆ. ಆರ್ಥಿಕತೆಗೆ ಬೂಸ್ಟ್‌ ಸಿಗಲಿದೆ. ಹೀಗಾಗಿ ಈ ನಿರೀಕ್ಷೆಯಲ್ಲಿ ಹೂಡಿಕೆದಾರರು ಪಾಸಿಟಿವ್‌ ಆಗಿ ರಿಯಾಕ್ಟ್‌ ಮಾಡಿದ್ದಾರೆ. ಇನ್ನು ಮಿಡ್‌ಕ್ಯಾಪ್‌ ಮತ್ತು ಸ್ಮಾಲ್‌ಕ್ಯಾಪ್‌ ಕಂಪನಿಗಳು ಕೂಡ ಚೆನ್ನಾಗಿ ಪರ್ಫಾರ್ಮೆನ್ಸ್‌ ನೀಡಿದ್ದು ಷೇರುಮಾರುಕಟ್ಟೆ ಹಸಿರುಪಟ್ಟಿಯಲ್ಲಿ ಎಂಡ್‌ ಆಗೋಕೆ ಸಹಾಯ ಮಾಡಿದೆ. ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ ಬರೋಬ್ಬರಿ 540 ಪಾಯಿಂಟ್ಸ್‌ ಅಥ್ವಾ 0.75% ಗಳಿಸಿ 72,641.19ಕ್ಕೆ ಅಂತ್ಯವಾಗಿದೆ. ಇನ್ನು ನಿಫ್ಟಿ 173 ಪಾಯಿಂಟ್ಸ್‌ ಅಥ್ವಾ 0.79% ಗಳಿಸಿ 22,011.95ಕ್ಕೆ ಏರಿಕೆಯಾಗಿದೆ. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ 08 ಪೈಸೆ ಇಳಿಕೆ ಕಂಡು 83.12 ಆಗಿದೆ (83 ರೂಪಾಯಿ 12 ಪೈಸೆ).

-masthmagaa.com

Contact Us for Advertisement

Leave a Reply