ವಾರದ ಮೊದಲ ದಿನ ಸೆನ್ಸೆಕ್ಸ್‌ನ 20 ಸ್ಟಾಕ್‌ಗಳು ಕೆಂಪು ಪಟ್ಟಿಯಲ್ಲಿ!

masthmagaa.com:

ವಾರದ ಮೊದಲ ದಿನ ಹೋಳಿ ಪ್ರಯುಕ್ತ ಷೇರುಪೇಟೆ ಕ್ಲೋಸ್‌ ಆಗಿದ್ದು… ಎರಡನೇ ದಿನದ ವಹಿವಾಟು ಕೆಂಪು ಪಟ್ಟಿಯಲ್ಲಿ ಕೊನೆಯಾಗಿದೆ. ಕಳೆದ ವಾರ ಮೂರು ಸೆಷನ್‌ಗಳಲ್ಲಿ ಸತತವಾಗಿ ಚೆನ್ನಾಗಿ ಪರ್ಫಾಮೆನ್ಸ್‌ ನೀಡಿರೋ ಷೇರುಪೇಟೆ ವಾರದ ಮೊದಲ ವಹಿವಾಟಿನಲ್ಲಿ ನಷ್ಟ ಮಾಡ್ಕೊಂಡಿದೆ. ಸೆನ್ಸೆಕ್ಸ್‌ನ 20 ಸ್ಟಾಕ್‌ಗಳು ಕಳಪೆ ಪ್ರದರ್ಶನ ನೀಡಿದ್ದು, ಪವರ್‌ ಗ್ರಿಡ್‌, ಭಾರತಿ ಏರ್ಟೆಲ್‌ ಮತ್ತು ವಿಪ್ರೋ ಟಾಪ್‌ ಲೂಸರ್‌ಗಳಾಗಿವೆ. ಆದ್ರೆ ಮಿಡ್‌ಕ್ಯಾಪ್‌ ಕಂಪನಿಗಳು ತಕ್ಕಮಟ್ಟಿಗೆ ಒಳ್ಳೆ ಪರ್ಫಾಮೆನ್ಸ್‌ ನೀಡಿ ಲಾಭ ಮಾಡ್ಕೊಂಡಿವೆ. ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ 362 ಪಾಯಿಂಟ್ಸ್‌ ಅಥ್ವಾ 0.50% ಇಳಿಕೆಯಾಗಿ 72,470.30ಕ್ಕೆ ತಲುಪಿದೆ. ಇನ್ನು ನಿಫ್ಟಿ 92 ಪಾಯಿಂಟ್ಸ್‌ ಅಥ್ವಾ 0.42% ಕಳೆದುಕೊಂಡು 22,004.70ಕ್ಕೆ ಇಳಿಕೆಯಾಗಿದೆ. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ 32 ಪೈಸೆ ಏರಿಕೆ ಕಂಡು 83.29 ಆಗಿದೆ (83 ರೂಪಾಯಿ 29 ಪೈಸೆ).

-masthmagaa.com

Contact Us for Advertisement

Leave a Reply