ಸ್ಟಾಕ್ ಮಾರ್ಕೆಟ್‌ಗೆ ಶಕ್ತಿ ತುಂಬಿದ ಲಾರ್ಜ್‌ ಕ್ಯಾಪ್‌ ಫಂಡ್‌ಗಳು!

masthmagaa.com:

ಮಂಗಳವಾರ ಕುಸಿದಿದ್ದ ಭಾರತದ ಸ್ಟಾಕ್‌ ಮಾರ್ಕೆಟ್‌ನ್ನ ರಿಲಾಯನ್ಸ್‌ ಇಂಡಸ್ಟ್ರಿ ಹಾಗೂ HDFC ಬ್ಯಾಂಕ್‌ಗಳು ಸೇರ್ಕೊಂಡು ಮೇಲೆತ್ತಿವೆ. ಒಳ್ಳೇ ಬ್ರೋಕರೇಜ್‌ ರೇಟಿಂಗ್‌ ಫಲವಾಗಿ ರಿಲಾಯನ್ಸ್‌ 3.49% ಗಳಿಕೆ ಕಂಡು ದಾಖಲೆಯ ₹2,983.75ಕ್ಕೆ ತಲುಪಿ, ₹3000 ಮಾರ್ಕ್‌ನ್ನ ಟಚ್‌ ಮಾಡೋ ನಿರೀಕ್ಷೆ ಮೂಡಿಸಿದೆ. ಒಟ್ಟಾರೆಯಾಗಿ ಎಲ್ಲಾ ಲಾರ್ಜ್‌ ಕ್ಯಾಪ್‌ ಕಂಪನಿಗಳು ಇವತ್ತು ಭರ್ಜರಿ ಲಾಭಗಳಿಸಿವೆ. ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ 526 ಪಾಯಿಂಟ್ಸ್‌ ಗಳಿಸಿ 72,996ಕ್ಕೆ ತಲುಪಿದ್ರೆ, ನಿಫ್ಟಿ 119 ಪಾಯಿಂಟ್ಸ್‌ಗಳಿಸಿ 22,124ಕ್ಕೆ ರೀಚ್‌ ಆಗಿದೆ. ಬಜಾಜ್‌ ಷೇರುಗಳು ಉತ್ತಮ ಲಾಭ ಗಳಿಸಿ ₹10,000ದ ಬೈ ಬ್ಯಾಕ್‌ ಅಂತ ತಲುಪೋ ಹಂತಕ್ಕೆ ತಲುಪಿದೆ. ಸದ್ಯ ಕಂಪನಿ ಷೇರುಗಳು ₹9,200 ಮಾರ್ಕ್‌ ಕ್ರಾಸ್‌ ಮಾಡಿದೆ. ಇನ್ನಿ ಈ ವಾರ ಚಾಲೆಟ್‌ ಹೋಟೆಲ್ಸ್‌ ₹780.76ರ ಬೆಲೆಯಲ್ಲಿ IPO ಇಶ್ಯೂ ಮಾಡಲಿದೆ. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ 08 ಪೈಸೆ ಇಳಿಕೆ ಕಂಡು 83.37 ಆಗಿದೆ (83 ರೂಪಾಯಿ 37 ಪೈಸೆ).

-masthmagaa.com

Contact Us for Advertisement

Leave a Reply