ಷೇರುಪೇಟೆ: ಆಟೋ & ಸ್ಟೀಲ್‌ ಬಲ, ಹಸಿರುಪಟ್ಟಿಯಲ್ಲಿ ಅಂತ್ಯ

masthmagaa.com:

ವಾರದ ಮೊದಲ ದಿನ ಷೇರು ಮಾರುಕಟ್ಟೆಯಲ್ಲಿ ಸ್ಲಲ್ಪ ಚೇತರಿಕೆಯಾಗಿದ್ದು, ದಿನದ ವಹಿವಾಟು ಹಸಿರು ಪಟ್ಟಿಯಲ್ಲಿ ಅಂತ್ಯವಾಗಿದೆ. ಟಾಟಾ ಸ್ಟೀಲ್‌, ಮಹಿಂದ್ರಾ & ಮಹಿಂದ್ರಾ, JSW ಸ್ಟೀಲ್‌ ಮತ್ತ ಟಾಟಾ ಮೋಟರ್ಸ್‌ನಂತಹ ಕೆಲ ಮೆಟಲ್‌ ಮತ್ತು ಆಟೋ ಕಂಪನಿಗಳ ಉತ್ತಮ ಪ್ರದರ್ಶನದಿಂದ ಈ ಚೇತರಿಕೆ ಕಂಡಿದೆ. ಅಲ್ಲದೇ ಚೀನಾದ ಕೈಗಾರಿಕಾ ಔಟ್‌ಪುಟ್‌ ಜನವರಿ ಮತ್ತು ಫೆಬ್ರುವರಿ ಅವಧಿಯಲ್ಲಿ y-o-y 7% ಏರಿಕೆಯಾಗಿದ್ದು ಷೇರು ಮಾರುಕಟ್ಟೆಗೆ ಸಹಾಯವಾಗಿದೆ. ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ 100 ಪಾಯಿಂಟ್ಸ್‌ ಅಥ್ವಾ 0.14% ಗಳಿಸಿ 72,748.42ಕ್ಕೆ ಏರಿಕೆಯಾಗಿದ್ದು, ನಿಫ್ಟಿ 32.35 ಪಾಯಿಂಟ್ಸ್‌ ಅಥ್ವಾ 0.15% ಗಳಿಸಿ 22,055.7ಕ್ಕೆ ಏರಿಕೆಯಾಗಿದೆ. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ 04 ಪೈಸೆ ಇಳಿಕೆ ಕಂಡು 82.90 ಆಗಿದೆ.

-masthmagaa.com

Contact Us for Advertisement

Leave a Reply