ಪ್ಯಾರಾಲಂಪಿಕ್ಸ್​ನಲ್ಲಿ ಈ ಸಲ 19 ಪದಕ: ಕನ್ನಡಿಗನ ಬೆಳ್ಳಿ ಸಾಧನೆ

masthmagaa.com:

ಇವತ್ತು ಪ್ಯಾರಾಲಿಂಪಿಕ್ಸ್‌ನ ಬ್ಯಾಡ್ಮಿಂಟನ್​​​ನಲ್ಲಿ ಕೃಷ್ಣ ನಗರ್‌ ಭಾರತಕ್ಕೆ 5ನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಹಾಂಗ್‌ ಕಾಂಗ್‌ನ ಮ್ಯಾನ್‌ ಕೈ ಚು ಅವರನ್ನ ಸೋಲಿಸಿ ಚಿನ್ನದ ಸಾಧನೆ ಮಾಡಿದ್ದಾರೆ. ಅಲ್ಲದೆ ಕನ್ನಡಿಗ ಐಎಎಸ್‌ ಅಧಿಕಾರಿಯಾಗಿರುವ ಯತಿರಾಜ್‌ ಸುಹಾಸ್‌ ಅವರು ಫ್ರಾನ್ಸ್‌ನ ನಂ 1 ಆಟಗಾರ ಲ್ಯೂಕಾಸ್ ಮಜೂರ್ ಅವರ ವಿರುದ್ಧ ಫೈನಲ್‌ ಪಂದ್ಯದಲ್ಲಿ ಸೋತಿದ್ದಾರೆ. ಆದ್ರೂ ಕೂಡ ಬೆಳ್ಳಿ ಗೆದ್ದು, ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಅಂದಹಾಗೆ ಇವತ್ತಿಗೆ ಪ್ಯಾರಾಲಂಪಿಕ್ಸ್ ಪಂದ್ಯಾವಳಿ ಮುಗಿದಿದೆ. ಈ ಸಲ ಭಾರತ ಪ್ಯಾರಾಲಂಪಿಕ್ಸ್​ನಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಯಾಕಂದ್ರೆ ಪ್ಯಾರಾಲಂಪಿಕ್ಸ್ ಶುರುವಾದಲ್ಲಿಂದ ಈವರೆಗೆ ಭಾರತ ಗೆದ್ದಿದ್ದಿದ್ದು ಒಟ್ಟು 12 ಪದಕ ಮಾತ್ರ. ಅದ್ರೆ ಈ ಸಲ ಒಂದೇ ಪ್ಯಾರಾಲಂಪಿಕ್ಸ್​ನಲ್ಲಿ 19 ಪದಕ ಗೆದ್ದಿದೆ ಭಾರತ.. 5 ಚಿನ್ನ, 8 ಬೆಳ್ಳಿ ಮತ್ತು 6 ಕಂಚಿನ ಪದಕ ಭಾರತದ ಪಾಲಾಗಿದೆ.

ಇನ್ನು ಇವತ್ತು ಬ್ಯಾಡ್‌ಮಿಂಟನ್‌ನಲ್ಲಿ ಬೆಳ್ಳಿ ಪದಕ ಗೆದ್ದಿರೋ ಕನ್ನಡಿಗ ಸುಹಾಸ್ ಬಗ್ಗೆ ಇಲ್ಲಿ ಸ್ವಲ್ಪ ಹೇಳಬೇಕು. ಯಾಕಂದ್ರೆ ಸುಹಾಸ್‌ ಯತಿರಾಜ್‌ ಮೂಲತಃ ಕರ್ನಾಟಕದ ಹಾಸನದವರು. ಹುಟ್ಟಿನಿಂದಲೇ ಕಾಲಿನ ಸಮಸ್ಯೆ ಇದ್ರೂ ಓದಿ ಐಎಎಸ್ ಅಧಿಕಾರಿಯಾದ ಇವರು ಈಗ ಉತ್ತರ ಪ್ರದೇಶದ ಗೌತಮ ಬುದ್ಧನಗರದ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸ್ತಿದ್ದಾರೆ. ಇದ್ರ ನಡುವೆಯೇ ಪ್ಯಾರಾಲಂಪಿಕ್ಸ್​ನಲ್ಲಿ ಬೆಳ್ಳಿ ಸಾಧನೆ ಮಾಡಿ, ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.

-masthmagaa.com

Contact Us for Advertisement

Leave a Reply