“ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾಗೆ ಶಭಾಷ್‌ ಎಂದ ಟಾಲಿವುಡ್‌ ನಟಿ !

masthmagaa.com:

ಸಮಂತಾ ಟಾಲಿವುಡ್‌ನಲ್ಲಿ ಸಖತ್‌ ಬೇಡಿಕೆ ಇರುವ ನಟಿ. ಸದ್ಯ ಸಮಂತಾ ಅಭಿನಯದ ಖುಷಿ ಮೂವಿ ರಿಲೀಸ್‌ ಆಗಿ ಒಳ್ಳೆ ಪ್ರಶಂಸೆಯನ್ನೂ ಸಹ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಸಮಂತಾ ಕನ್ನಡದ ಸಪ್ತ ಸಾಗರಾಚೆ ಎಲ್ಲೋ ಸಿನಿಮಾಗವನ್ನ ಹಾಡಿ ಹೊಗಳಿದ್ದಾರೆ.

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ತೆಲುಗು ಭಾಷೆಗೆ ಸೆಪ್ಟೆಂಬರ್‌ 22ಕ್ಕೆ ರಿಲೀಸ್‌ ಆಗಲಿದೆ. ತೆಲುಗಿನಲ್ಲಿ ಸಿನಿಮಾ ಬರೋದಕ್ಕಿಂತ ಮೊದಲೇ ಸಮಂತಾ ಕನ್ನಡ ವರ್ಷನ್‌ನಲ್ಲೇ ಸಿನಿಮಾವನ್ನ ನೋಡಿದ್ದಾರೆ. ಸಿನಿಮಾವನ್ನ ನೋಡೋದ್ರ ಜೊತೆಗೆ ಚಿತ್ರತಂಡಕ್ಕೆ ಹಾಗೂ ರುಕ್ಮಿಣಿ ವಸಂತ್‌ ಅವರ ಅಭಿನಯಕ್ಕೆ ಶಭಾಸ್‌ ಅಂದಿದ್ದಾರೆ.

” ಇದು ನೋಡಲೇಬೇಕಾದ ಸಿನಿಮಾ. ರಕ್ಷಿತ್ ಶೆಟ್ಟಿ, ರುಕ್ಮಣಿ ವಸಂತ್ ಹಾಗೂ ಹೇಮಂತ್ ರಾವ್ ತಂಡಕ್ಕೆ ಶುಭಾಶಯ” ಅಂತ ಬರೆದು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply