‘ದುಬೈಗೆ ಹೋಗಬೇಡಿ… ಅಲ್ಲಿ ಜೀವಕ್ಕೆ ಅಪಾಯ’ – ಇಸ್ರೇಲ್ ಎಚ್ಚರಿಕೆ

masthmagaa.com:

ಇರಾನ್ ಪ್ರಾಯೋಜಿತ ಭಯೋತ್ಪಾದನ ದಾಳಿ ಭೀತಿಯಿಂದ ಇಸ್ರೇಲ್ ತನ್ನ ನಾಗರಿಕರಿಗೆ ಎಚ್ಚರಿಕೆ ಜಾರಿ ಮಾಡಿದೆ. ಇಸ್ರೇಲ್ ನ್ಯಾಶನಲ್​ ಸೆಕ್ಯೂರಿಟಿ ಏಜೆನ್ಸಿ, ಯುಎಇನ ದುಬೈ, ಅಬುದಾಬಿ ಸೇರಿದಂತೆ, ಜಾರ್ಜಿಯಾ, ಅಜರ್​ಬೈಜಾನ್, ಬಹ್ರೇನ್, ಮತ್ತು ಇರಾಕ್​ನ ಖುರ್ದಿಶ್ ಪ್ರದೇಶಗಳಿಗೆ ಹೋಗದಂತೆ ಎಚ್ಚರಿಕೆ ಜಾರಿ ಮಾಡಿದೆ. ಈ ಭಾಗದಲ್ಲಿ  ಇಸ್ರೇಲಿ ನಾಗರಿಕರು ಮತ್ತು ಆಸ್ತಿಗಳನ್ನ ಗುರಿಯಾಗಿಸಿಕೊಂಡು ಇರಾನ್ ದಾಳಿ ಮಾಡಬಹುದು ಅಂತಾ ಹೇಳಿದೆ. ಕಳೆದ ವರ್ಷವಷ್ಟೇ ಯುಎಇ ಮತ್ತು ಇಸ್ರೇಲ್ ಅಮರಿಕ ಮಧ್ಯಸ್ಥಿಕೆಯಲ್ಲಿ ತಮ್ಮ ಸಂಬಂಧ ಸರಿ ಮಾಡಿಕೊಂಡಿದ್ರು. ಅದಾದ್ಮೇಲೆ ಇಸ್ರೇಲ್ ನಾಗರಿಕರಿಗೆ ಯುಎಇನ ದುಬೈ ಮತ್ತು ಅಬುದಾಬಿ ಟೂರಿಸ್ಟ್ ಅಟ್ರಾಕ್ಷನ್​​​ ಆಗಿದ್ದವು. ಆಗಲೂ ಇದೇ ಥರದ ಎಚ್ಚರಿಕೆ ಕೊಟ್ಟಿದ್ದರು. ಆದ್ರೂ ಇಸ್ರೇಲಿಗರು ಏನಾಗಲ್ಲ ಅಂತಾ ದೊಡ್ಡ ಪ್ರಮಾಣದಲ್ಲಿ ಇಲ್ಲಿಗೆ ಟ್ರಿಪ್ ಹೊಡೀತಿದ್ರು. ಈಗ ಮತ್ತೊಮ್ಮೆ ಎಚ್ಚರಿಕೆ ಜಾರಿ ಮಾಡಲಾಗಿದೆ.

-masthmagaa.com

Contact Us for Advertisement

Leave a Reply