ಅಮೆರಿಕ ಚುನಾವಣೆ: ಟ್ರಂಪ್‌ ರೇಸ್‌ಗೆ ತುಳಸಿ ಗಬ್ಬಾರ್ಡ್‌ ಸಾಥ್‌!

masthmagaa.com:

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ರೇಸ್‌ ನಡೀತಿದ್ದು, ಸದ್ಯ ಪ್ರಮುಖ ಪಕ್ಷಗಳಾದ ರಿಪಬ್ಲಿಕನ್‌ ಮತ್ತು ಡೆಮಾಕ್ರೆಟಿಕ್‌ನಲ್ಲಿ ಸೂಕ್ತ ಅಭ್ಯರ್ಥಿಗಾಗಿ ಪ್ರೈಮರೀಸ್‌ ವೋಟಿಂಗ್‌ ನಡೀತಿದೆ. ಅಫ್‌ಕೋರ್ಸ್‌, ಡೆಮಾಕ್ರೆಟಿಕ್‌ನಲ್ಲಿ ಈಗಿನ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಗೆಲ್ಲುವ ಕುದುರೆ ಅಂತಾನೇ ಹೇಳ್ಬೋದು. ಇನ್ನು ರಿಪಬ್ಲಿಕನ್‌ ಪಾರ್ಟಿನಲ್ಲೂ ಮಾಜಿ ಅಮೆರಿಕ ಅಧ್ಯಕ್ಷ ಟ್ರಂಪ್‌ ಜನಪ್ರಿಯತೆಗೆ, ರಿಪಬ್ಲಿಕನ್‌ ಅಭ್ಯರ್ಥಿ ನಿಕ್ಕಿ ಹ್ಯಾಲೆಗೆ ಇತ್ತೀಚಿನ ಪ್ರೈಮರೀಸ್‌ ವೋಟಿಂಗ್‌ನಲ್ಲಿ ಭಾರಿ ಹಿನ್ನಡೆಯಾಗಿತ್ತು…ಮುಖಭಂಗ ಕೂಡ ಉಂಟಾಗಿತ್ತು. ಆದ್ರಿಂದ ರಿಪಬ್ಲಿಕನ್‌ನಲ್ಲಿ ಟ್ರಂಪ್‌ಗೆ ಟಕ್ಕರ್‌ ಕೊಡೋ ಕ್ಯಾಂಡಿಡೇಟ್ಸ್‌ ಇಲ್ದೇ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಮ್ಮೆ ಟ್ರಂಪ್‌ ಮತ್ತು ಬೈಡನ್‌ ಮುಖಾಮುಖಿ ಆಗೋದು ಆಲ್ಮೋಸ್ಟ್‌ ಕನ್ಫರ್ಮ್‌ ಅಂತಾನೇ ಹೇಳ್ಬೋದು. ಈಗ ಇವ್ರಿಬ್ರ ನಡುವಿನ ರೇಸ್‌ ವಿಚಾರಕ್ಕೆ ಬಂದ್ರೆ…ಇತ್ತೀಚಿನ ದಿನಗಳಲ್ಲಿ ಟ್ರಂಪ್‌ ಪಾಪ್ಯುಲಾರಿಟಿ ಸಿಕ್ಕಾಪಟ್ಟೆ ಹೆಚ್ಚಾಗ್ತಿದೆ. ಇಲ್ಲಿವರೆಗೂ ನಡೆದ ಪ್ರೈಮರೀಸ್‌ ವೋಟಿಂಗ್‌ ಗಮನಿಸಿದ್ರೆ, ಬೈಡನ್‌ರಿಂದ ಟ್ರಂಪ್‌ಗೆ ಜನಬೆಂಬಲ ಒಂದು ಪಟ್ಟು ಜಾಸ್ತೀನೆ ಇದೆ. ಇವೆಲ್ಲದ್ರ ನಡುವೆ ಇದೀಗ ರಿಪಬ್ಲಿಕನ್‌ ಪಾರ್ಟಿಯ ಉಪಾಧ್ಯಕ್ಷರಾಗಿ ಯಾರ್‌ ಆಯ್ಕೆ ಆಗ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ಹೊರ ಬಿದ್ದ ಹಾಗಿದೆ. ಹಿಂದೂ ಮಹಿಳೆ… ಮಾಜಿ ಅಮೆರಿಕ ಸಂಸದೆ ತುಳಸಿ ಗಬ್ಬಾರ್ಡ್‌ ಹೆಸರು ಕೇಳಬರ್ತಿದೆ. ಎಸ್‌, ಈ ಬಗ್ಗೆ ಟ್ರಂಪ್‌ ಮತ್ತು ತುಳಸಿ ಗಬ್ಬಾರ್ಡ್‌ ನಡುವೆ ಮಾತುಕತೆ ನಡೀತಿದೆ ಅಂತ ಹೇಳಲಾಗ್ತಿದೆ. ಟ್ರಂಪ್‌ ಅಧ್ಯಕ್ಷೀಯ ರೇಸ್‌ನಲ್ಲಿ ತುಳಸಿ ಗಬ್ಬಾರ್ಡ್‌ ಉಪಾಧ್ಯಕ್ಷೀಯ ಅಭ್ಯರ್ಥಿಯಾಗಿ ಕಣಕ್ಕಿಳಿಯೋ ಸಾಧ್ಯತೆಗಳಿವೆ ಎನ್ನಲಾಗ್ತಿದೆ. ಹೀಗಂತ ಅಮೆರಿಕದ ಪತ್ರಿಕೆ ವಾಷಿಂಗ್‌ಟನ್‌ ಪೋಸ್ಟ್‌ ವರದಿ ಮಾಡಿದೆ. ಹೀಗಾದ್ರೆ… ಕಮಲಾ ಹ್ಯಾರಿಸ್‌ ನಂತ್ರ ಹಿಂದೂ ಮಹಿಳೆ ಅಮೆರಿಕದಲ್ಲಿ ಉಪಾಧ್ಯಕ್ಷರಾಗೋ ಚಾನ್ಸಸ್‌ ಹೆಚ್ಚಿದೆ. ಅಂದ್ಹಾಗೆ ತುಳಸಿ ಗಬ್ಬಾರ್ಡ್‌ ಅವ್ರು ಹುಟ್ಟಿದ್ದು ಬೆಳದಿದ್ದೆಲ್ಲಾ ಅಮೆರಿಕದಲ್ಲೇ. ಭಾರತದ ಮೂಲದವ್ರು ಆಗದಿದ್ರು ಕೂಡ, ಇವ್ರು ತಮ್ಮ ತಾಯಿಯಂತೆ ಹಿಂದೂ ಧರ್ಮವನ್ನ ಅನುಸರಿಸುತ್ತಿದ್ದಾರೆ. ಆದ್ರೆ ಈಗಿನ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಮಾತ್ರ ಭಾರತದ ಮೂಲದವ್ರು. ಇವ್ರ ತಾಯಿ ಹಿಂದೂ ಆಗಿದ್ರೆ, ತಂದೆ ಕ್ರಿಶ್ಚಿಯನ್‌. ಸೋ ಇವ್ರು ಎರಡೂ…ಹಿಂದೂ ಮತ್ತು ಕ್ರಿಶ್ಚಿಯನ್‌ ಧರ್ಮವನ್ನ ಅನುಸರಿಸ್ತಾರೆ.

ಇನ್ನು ಈ ತುಳಸಿ ಗಬ್ಬಾರ್ಡ್‌ ವಿಚಾರಕ್ಕೆ ಬಂದ್ರೆ, ಇವ್ರು ಈ ಹಿಂದೆ 2013 ಮತ್ತು 2021 ರ ಅವಧಿಯಲ್ಲಿ ಡೆಮಾಕ್ರೆಟಿಕ್‌ ಪಾರ್ಟಿನಲ್ಲಿ ಇದ್ಕೊಂಡು ಅಮೆರಿಕದ ಸಂಸದೆ ಆಗಿ ಕೆಲಸ ಮಾಡಿದ್ರು. ನಂತ್ರ ಇವ್ರು 2022ರಲ್ಲಿ ಡೆಮಾಕ್ರೆಟಿಕ್‌ ಪಾರ್ಟಿ ತೊರೆದು… ರಿಪಬ್ಲಿಕನ್‌ ಪಾರ್ಟಿಗೆ ಹಾರಿದ್ರು. ಇನ್ನು ಅಮೆರಿಕದ ಉಪಾಧ್ಯಕ್ಷೀಯ ಅಭ್ಯರ್ಥಿಯಾಗೋ ವಿಚಾರವಾಗಿ ಟ್ರಂಪ್‌ ಜೊತೆ ಮಾತುಕತೆ ನಡೆಸಿರೋದಾಗಿಯೂ ತುಳಸಿ ಅಮೆರಿಕದ ನ್ಯೂಸ್‌ ಚಾನೆಲ್‌ ಒಂದ್ರಲ್ಲಿ ಹೇಳ್ಕೊಂಡಿದ್ರು. ಇನ್ನು ಅಮೆರಿಕದ ಅಧ್ಯಕ್ಷೀಯ ಚುನಾವಣೆ ಬಗ್ಗೆ ಗಮನಿಸ್ಬೇಕಾದ ಮತ್ತೊಂದು ಅಂಶವಂದ್ರೆ… ಎರಡೂ ಪಕ್ಷದಲ್ಲಿ ಮುಂಚೂಣಿಯಲ್ಲಿರೋ ಅಭ್ಯರ್ಥಿಗಳಾದ ಟ್ರಂಪ್‌ ಮತ್ತು ಬೈಡನ್‌ರ ವಯಸ್ಸು. ಹೌದು, ಅಧ್ಯಕ್ಷ ಬೈಡನ್‌ಗೆ 81 ವರ್ಷವಾದ್ರೆ…ಟ್ರಂಪ್‌ಗೆ 77 ವರ್ಷ. ಈಗಾಗಲೇ ಅಮೆರಿಕದಲ್ಲಿ ಬೈಡನ್‌ರಿಗೆ ಏಜ್‌ ಆಯ್ತು…. ಅವ್ರಿಗೆ ಅರಳುಮರಳು ಅನ್ನೋ ಮಾತೆಲ್ಲಾ ಕೇಳಿಬಂದ್ವು. ಸೋ ಹೀಗಿರುವಾಗ…. ಅಮೆರಿಕ ಅಧ್ಯಕ್ಷರ ಏಜ್‌ ಆಗಿರೋ ವಿಚಾರ ಉಪಾಧ್ಯಕ್ಷರಿಗೆ ವರವಾಗೋ ಸಾಧ್ಯತೆ ಕೂಡ ಇದೆ. ಅಮೆರಿಕ ಸಂವಿಧಾನದ 25ನೇ ತಿದ್ದುಪಡಿ ಪ್ರಕಾರ… ಅಮೆರಿಕದ ಅಧ್ಯಕ್ಷರು ತಮ್ಮ ಅವಧಿಯಲ್ಲಿ ಮೃತಪಟ್ರೇ, ರಿಸೈನ್‌ ಮಾಡಿದ್ರೆ ಅಥ್ವಾ ಅವ್ರನ್ನ ಉಚ್ಚಾಟನೆ ಮಾಡಿದ್ರೆ…ಉಪಾಧ್ಯಕ್ಷರಿಗೆ ಇದು ಪ್ಲಸ್‌ ಆಗುತ್ತೆ. ಈ ವೇಳೆ ಅಮೆರಿಕ ಅಧ್ಯಕ್ಷರ ಸ್ಥಾನಕ್ಕೆ ಉಪಾಧ್ಯಕ್ಷರು ಏರ್ಬೋದಾಗಿದೆ. ಈಗಿನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವ್ರ ಮ್ಯಾಟರ್‌ನಲ್ಲೂ ಅದೇ ನಡೀತಿದೆ. ಬೈಡನ್‌ರಿಗೆ ವಯಸ್ಸಾಗಿದೆ… ನೆನಪಿನ ಶಕ್ತಿ ಕುಗ್ಗೋಗಿದೆ. ಸೋ ಕಮಲಾ ಹ್ಯಾರಿಸ್‌ ಅಧ್ಯಕ್ಷರಾಗ್ಲಿ ಅನ್ನೋ ಮಾತುಗಳು ಅಮೆರಿಕದಲ್ಲಿ ಕೇಳಿಬರ್ತಿವೆ. ಆದ್ರಿಂದ…ಮುಂಬರೋ ದಿನಗಳಲ್ಲಿ ಟ್ರಂಪ್‌ ಮತ್ತು ಬೈಡನ್‌ನ್ರ ಏಜ್‌ನಿಂದಾಗಿ ಈ ಹಿಂದೂ ಮಹಿಳಾ ಉಪಾಧ್ಯಕ್ಷರು ಅಮೆರಿಕಾದ ಅಧ್ಯಕ್ಷರಾಗೋ ಚಾನ್ಸಸ್‌ ಕೂಡ ಇದೆ ಅನ್ಬೋದು.

-masthmagaa.com

Contact Us for Advertisement

Leave a Reply