ಟರ್ಕಿ ಅಧ್ಯಕ್ಷರಿಗೆ ಅಮೆರಿಕ F-16 ಮೇಲೆ ಆಸೆ!

masthmagaa.com:

ಟರ್ಕಿ ಅಮೆರಿಕದಿಂದ F 16 ಯುದ್ಧ ವಿಮಾನಗಳ ಖರೀದಿಗೆ ಟ್ರೈ ಮಾಡ್ತಿದೆ. ಟರ್ಕಿ ಅಮೆರಿಕ ಪ್ರಾಬಲ್ಯದ ನ್ಯಾಟೋ ಮೆಂಬರ್ ಕಂಟ್ರಿ. ಆದ್ರೂ ಇತ್ತೀಚೆಗೆ ಟರ್ಕಿ-ಅಮೆರಿಕ ಸಂಬಂಧ ಹಾಳಾಗಿದೆ. ವಿಶೇಷವಾಗಿ ರೆಜೆಪ್ ತಯ್ಯಿಪ್ ಎರ್ಡೋಆನ್ ಟರ್ಕಿಯ ಅಘೋಷಿತ ಸರ್ವಾಧಿಕಾರಿ ಆದಲ್ಲಿಂದ ಸಂಬಂಧ ತುಂಬಾ ಹಾಳಾಗಿದೆ. ಟರ್ಕಿ ರಷ್ಯಾಗೆ ಹತ್ತಿರ ಹೋಗ್ತಿದೆ. ಅಮೆರಿಕದ ವಿರೋಧದ ನಡುವೆಯೂ ರಷ್ಯಾದಿಂದ S400 ಕ್ಷಿಪಣಿ ನಿರೋಧಕ ವ್ಯವಸ್ಥೆ ಪರ್ಚೇಸ್ ಮಾಡಿದೆ. ಇದರ ಪರಿಣಾಮ F35 ಡೀಲ್ ನಿಂದ ಟರ್ಕಿಯನ್ನ ಅಮೆರಿಕ ಹೊರಗೆ ಹಾಕಿತ್ತು. ಅತ್ಯಾಧುನಿಕ, ದುಬಾರಿ F35 ಡೀಲ್ಗೆ ಅಂತಾನೇ ಟರ್ಕಿ ಸುಮಾರು 11 ಸಾವಿರ ಕೋಟಿ ಮೀಸಲಿಟ್ಟಿತ್ತು. ಅದೇದುಡ್ಡಲ್ಲಿ ಈಗ F35ಗಿಂತ ಸಾಕಷ್ಟು ಚೀಪ್ ಇರೋ, ಆದ್ರೆ ಈಗಲೂ ಹಲವು ದೇಶಗಳು ಖರೀದಿಸಬೇಕು ಅಂತ ಕನಸು ಕಾಣೋ F16ಗಳನ್ನ ಖರೀದಿ ಮಾಡ್ತೀವಿ ಅಂತ ಟರ್ಕಿ ಹೊರಟಿದೆ. ಈ ಬಗ್ಗೆ ಅಮೆರಿಕಗೆ ಮನವಿ ಮಾಡಿದೆ ಟರ್ಕಿ. ಹವಾಮಾನ ಬಂದಲಾವಣೆ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸಿಕ್ಕಾಗಲೂ ಟರ್ಕಿ ಅಧ್ಯಕ್ಷ ಎರ್ಡೋಆನ್ ಈ ಬಗ್ಗೆ ಮತ್ತೆ ಮನವಿ ಮಾಡಲಿದ್ದಾರೆ ಅಂತ ವರದಿಯಾಗ್ತಿದೆ. ಆದ್ರೆ ಇದಕ್ಕೆಲ್ಲಾ ಅಮೆರಿಕ ಕಿಮ್ಮತ್ತು ಕೊಡದಿದ್ದರೆ ಟರ್ಕಿ ಫಯಟರ್ ಜೆಟ್ ಗಳಿಗೂ ರಷ್ಯಾ ಕಡೆ ಮುಖ ಮಾಡೋ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply