ಹಮಾಸ್‌ ಮುಖ್ಯಸ್ಥನ ಭೇಟಿ ಮಾಡಿದ ಟರ್ಕಿ ಅಧ್ಯಕ್ಷ ರೆಸೆಪ್‌!

masthmagaa.com:

ಗಾಜಾ ಯುದ್ಧ ನಡೀತಿರೋ ನಡುವೆ ಇದೀಗ ಟರ್ಕಿ ಅಧ್ಯಕ್ಷ ರೆಸೆಪ್‌ ತಯ್ಯಿಪ್‌ ಎರ್ಡೋಗನ್‌ ಹಮಾಸ್‌ರನ್ನ ಭೇಟಿ ಮಾಡಿದ್ದಾರೆ. ಈ ವೇಳೆ ಹಮಾಸ್‌ ಮುಖ್ಯಸ್ಥ ಇಸ್ಮಾಯಿಲ್‌ ಹನಿಯೆಹ್‌ ಅವ್ರ ಜೊತೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವ್ರು, ಪ್ಯಾಲೆಸ್ತೀನಿಯರು ಒಂದಾಗ್ಬೇಕು ಅಂತ ಒತ್ತಾಯಿಸಿದ್ದಾರೆ. ʻಇಸ್ರೇಲ್‌ಗೆ ಸರಿಯಾಗಿ ಪಾಠ ಕಲಿಸಿ….ಅವ್ರ ವಿರುದ್ಧ ಜಯ ಗಳಿಸೋಕೆ ಇರೋ ಒಂದೇ ಒಂದು ಸೂತ್ರ ಅಂದ್ರೆ ಏಕತೆ ಮತ್ತು ಸಮಗ್ರತೆ. ಸೋ ಪ್ಯಾಲೆಸ್ತೀನರು ಒಂದಾಗ್ಬೇಕುʼ ಅಂತೇಳಿದ್ದಾರೆ. ಇನ್ನು ಈ ಭೇಟಿಯನ್ನ ಇಸ್ರೇಲ್‌ ವಿದೇಶಾಂಗ ಸಚಿವರಾದ ಇಸ್ರೇಲ್‌ ಕಾಟ್ಜ್‌ ಅವ್ರು ಖಂಡಿಸಿದ್ದಾರೆ. ʻಮುಸ್ಲಿಂರ ಮಿತ್ರ ಎರ್ಡೋಗನ್‌ ನಿಮಗೆ ನಾಚಿಕೆಯಾಗ್ಬೇಕುʼ ಅಂತ ಕಿಡಿಕಾರಿದ್ದಾರೆ.

ಇನ್ನೊಂದ್ಕಡೆ ಗಾಜಾದಲ್ಲಿ ಇಸ್ರೇಲ್‌-ಹಮಾಸ್‌ ಯುದ್ಧ ಕಂಟಿನ್ಯೂ ಆಗಿದ್ದು…ಅಲ್ಲಿನ ವೆಸ್ಟ್‌ ಬ್ಯಾಂಕ್‌ನಲ್ಲಿರೋ ನೂರ್‌ ಅಲ್‌-ಶಮ್ಸ್‌ ನಿರಾಶ್ರಿತರ ಕ್ಯಾಂಪ್‌ ಮೇಲೆ ಇಸ್ರೇಲ್‌ ಸೇನಾ ಪಡೆ ದಾಳಿ ನಡೆಸಿದೆ. ಪರಿಣಾಮ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ. ಜೊತೆಗೆ ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ ಅಂತ ಪ್ಯಾಲೆಸ್ತೀನ್‌ನ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply