ಕಚೇರಿ ಬಾಡಿಗೆ ಕಟ್ಟದ ವಿಶ್ವದ 2ನೇ ಶ್ರೀಮಂತ ವ್ಯಕ್ತಿ ಮಸ್ಕ್‌! ಕೇಸ್‌ ದಾಖಲು!

masthmagaa.com:

ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಒಡೆತನದ ಟ್ವಿಟರ್‌ ಕಂಪನಿ ದಿನಕ್ಕೊಂದು ವಿಚಾರವಾಗಿ ಸುದ್ದಿ ಆಗ್ತಾನೆ ಇರುತ್ತೆ. ಇದೀಗ ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿರೋ ತಮ್ಮ ಆಫೀಸ್‌ನ ಬಾಡಿಗೆ ಕಟ್ಟಿಲ್ಲ ಅಂತ ಕಂಪನಿ ಮೇಲೆ ಕೇಸ್‌ ದಾಖಲಾಗಿದೆ. ಅದು ಎಷ್ಟು? ಕೇವಲ 1.36 ಲಕ್ಷ ಡಾಲರ್‌ ಅಂದ್ರೆ ಸುಮಾರು 1 ಕೋಟಿ ರೂಪಾಯಿ ಅಷ್ಟೇ… ಎಲಾನ್‌ ಮಸ್ಕ್‌ಗೆ ಇದು ಉಗುರಿಗು ಸಮ ಅಲ್ಲ… ಅಷ್ಟಕ್ಕೆ ಮಾನ ಹರಾಜಾಗಿದೆ. ರೆಂಟ್‌ ಕಟ್ಟಿಲ್ಲ ಅಂತ ಜಾಗ ಬಾಡಿಗೆ ಕೊಟ್ಟ ಕೊಲಂಬಿಯಾ ರೀಟ್‌ ಅನ್ನೋ ಸಂಸ್ಥೆ ಕಂಪ್ಲೇಟ್‌ ಮಾಡಿದೆ. ಅಂದ್ಹಾಗೆ ಟ್ವಿಟರ್‌ ಹೆಡ್‌ಕ್ವಾರ್ಟರ್ಸ್‌ ಹಾಗೂ ತನ್ನ ಇತರ ಜಾಗತಿಕ ಆಫಿಸ್‌ಗಳ ಬಾಡಿಗೆಗಳನ್ನೂ ಮಸ್ಕ್‌ ಪೇ ಮಾಡಿಲ್ಲ ಅಂತ ಕಳೆದ ತಿಂಗಳು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿತ್ತು. ಇತ್ತೀಚೆಗೆ ಎರಡು ಚಾರ್ಟರ್‌ ಫ್ಲೈಟ್‌ಗಳಿಗೂ ಹಣ ಪಾವತಿಸೋಕೆ ನಿರಾಕರಿಸದ್ರು ಅಂತ ಅವ್ರ ಮೇಲೆ ಕೇಸ್‌ ದಾಖಲಾಗಿತ್ತು.

-masthmagaa.com

Contact Us for Advertisement

Leave a Reply