ಟ್ವೀಟ್‌ ನೋಡೋಕು ದುಡ್ಡು ಕಟ್ಬೇಕಾ?

masthmagaa.com:

33 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿರೋ ಟ್ವಿಟ್ಟರ್ ಈಗ ಶಾಕ್ ಕೊಟ್ಟಿದೆ. ಆದಾಯ ಹೆಚ್ಚಳ ದೃಷ್ಟಿಯಿಂದ ಮತ್ತು ನ್ಯೂಸ್​ಕಂಟೆಂಟ್ ನೀಡುವವರಿಗೆ ದುಡ್ಡು ಕೊಡಲು ಸುಪರ್ ಫಾಲೋಸ್​​ ಅನ್ನೋ ಸಬ್​​ಸ್ಕ್ರಿಪ್ಶನ್​ ನಿಯಮ ಜಾರಿಗೆ ತರಲು ಚಿಂತನೆ ನಡೆಸಿದೆ. ಇದ್ರಿಂದ ಕೆಲವೊಂದು ಹೈ ಪ್ರೊಫೈಲ್​ ಖಾತೆಗಳಲ್ಲಿ ಶೇರ್ ಮಾಡಲಾಗುವ ಮಾಹಿತಿಯನ್ನು ನೋಡಬೇಕಾದ್ರೆ ಸಬ್​ಸ್ಕ್ರಿಪ್ಶನ್ ಮಾಡಬೇಕಾಗುತ್ತೆ.

ಇದ್ರಿಂದ ಹೊಸ ಹೊಸ ಕಂಟೆಂಟ್​​​ಗಳನ್ನು ನೀಡುವವರು, ನ್ಯೂಸ್​ ಪಬ್ಲಿಷರ್​ಗಳಿಗೆ ಟ್ವಿಟ್ಟರ್ ಬಳಕೆದಾರರೇ ದುಡ್ಡು ನೀಡಿ ಬೆಂಬಲಿಸಿದಂತಾಗುತ್ತೆ. ಇದ್ರ ಜೊತೆಗೆ ತಾನೂ ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶ ಹೊಂದಿದೆ ಟ್ವಿಟ್ಟರ್. ಆದ್ರೆ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇನ್ನೂ ಕೂಡ ಟ್ವಿಟ್ಟರ್ ಬಹಿರಂಗಪಡಿಸಿಲ್ಲ.

-masthmagaa.com

Contact Us for Advertisement

Leave a Reply