ಎರಡು ದಿನಗಳಲ್ಲಿ ಪಾಕಿಸ್ತಾನದ 7 ಮಂದಿ ಉಗ್ರರ ಬೇಟೆ!

masthmagaa.com:

ಮೋದಿ ಪ್ರವಾಸದ ನಡುವೆಯೇ ಕಾಶ್ಮೀರ ಕಣಿವೆಯಲ್ಲಿ ಪೋಲೀಸರು ಭರ್ಜರಿ ಬೇಟೆಯಾಡಿದ್ದು ಪಾಕ್‌ ಮೂಲದ ಉಗ್ರಕ್ರಿಮಿಗಳನ್ನ ಸೆದೆಬಡಿದ್ದಾರೆ. ಪಾಕ್ ಮೂಲದ ಜೈಷ್ ಉಗ್ರ ಸಂಘಟನೆಗೆ ಸೇರಿದ ಐದೈದು ಉಗ್ರರನ್ನು ಮಟ್ಟ ಹಾಕಿದ್ದಾರೆ. ಪುಲ್ವಾಮ ಜಿಲ್ಲೆಯ ಪಾಹೂ ಬಳಿ ಮೂವರು ಮತ್ತು ಕುಲ್ಗಾಮ್‌ ಜಿಲ್ಲೆಯಲ್ಲಿ ಇಬ್ಬರು ಭಯೋತ್ಪಾದಕರನ್ನ ಹತ್ಯೆ ಮಾಡಲಾಗಿದೆ. ಉಗ್ರರ ಬಳಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಸಿಕ್ಕಿವೆ ಅಂತ ಕೂಡ ಪೊಲೀಸರು ಮಾಹಿತಿ ನೀಡಿದ್ಧಾರೆ. ಇನ್ನು ನಿನ್ನೆಯಷ್ಟೇ ಇಬ್ಬರು ಆತ್ಮಾಹುತಿ ದಾಳಿಕೋರರನ್ನು ಹೊಡೆದುರುಳಿಸಿದ್ದ ಯೋಧರು, ಅವರಿಗೆ ನೆರವು ನೀಡ್ತಿದ್ದ ಇಬ್ಬರನ್ನು ಅರೆಸ್ಟ್ ಕೂಡ ಮಾಡಿದ್ದಾರೆ. ಇವರಿಬ್ಬರೂ ಪಾಕಿಸ್ತಾನಕ್ಕೆ ಸೇರಿದ ಆತ್ಮಾಹುತಿ ದಾಳಿಕೋರರಾಗಿದ್ದು ಸಾಂಬಾ ಗಡಿಯಲ್ಲಿ ಭಾರತಕ್ಕೆ ನುಸುಳಿದ್ರು. ನಂತರ ಟ್ರಕ್​ ಒಂದರಲ್ಲಿ ಸುಂಜ್ವಾನ್​ಗೆ ತೆರಳಿದ್ರು ಅಂತ ಗೊತ್ತಾಗಿದೆ. ಅಂದಹಾಗೆ ಸುಂಜ್ವಾನ್ ಅನ್ನೋದು ಸೇನೆಯ ಪ್ರಮುಖ ನೆಲೆ ಇರುವ ಜಾಗವಾಗಿದೆ. ಆದ್ರೆ ಉಗ್ರರು ತಮ್ಮ ಟಾರ್ಗೆಟ್ ರೀಚ್ ಆಗೋಕು ಮುನ್ನವೇ ಹೊಡೆದಾಕಿದ್ದೀವಿ ಅಂತ ಭದ್ರತಾ ಪಡೆ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply