ಮಾತಾಡುವಾಗ ಸಭೆಯಿಂದ ಎದ್ದ ಪಾಶ್ಚೀಮಾತ್ಯ ರಾಷ್ಟ್ರಗಳು: ರಷ್ಯಾಗೆ ಭಾರಿ ಮುಜುಗರ

masthmagaa.com:

ಯುಕ್ರೇನ್‌ ಮೇಲಿನ ದಾಳಿಗೆ ಪ್ರತಿಯಾಗಿ ಜಾಗತಿಕ ಸಭೆ ಸಮಾರಂಭಗಳಲ್ಲಿ ಮುಜುಗರ ಮಾಡೋ ಮೂಲಕ ಪಾಶ್ಚೀಮಾತ್ಯ ದೇಶಗಳು ರಷ್ಯಾವನ್ನ ಇನ್ನಿಲ್ಲದಂತೆ ಕಾಡ್ತಾಯಿವೆ. ಈಗ ಜಿ 20 ರಾಷ್ಟ್ರಗಳ ಸಭೆಯಲ್ಲಿ ಕೂಡ ಇದೇ ನಡೆದಿದ್ದು ಸಭೆಯಲ್ಲಿ ರಷ್ಯಾ ಪ್ರತಿನಿಧಿಗಳು ಮಾತನಾಡುವಾಗ ಅಮೆರಿಕಾ,ಕೆನಡಾ, ಹಾಗು ಯುನೈಟೈಡ್‌ ಕಿಂಗ್ಡಮ್‌ ರಾಷ್ಟ್ರದ ಪ್ರತಿನಿಧಿಗಳು ಎದ್ದು ಹೋಗಿದ್ದಾರೆ. ಅಂದ್ಹಾಗೆ ಅಮೆರಿಕಾದ ವಾಷಿಂಗ್‌ಟನ್‌ ಅಲ್ಲಿ ಜಾಗತಿಕ ಆರ್ಥಿಕ ಅಭಿವೃದ್ದಿ ಬಗ್ಗೆ ಚರ್ಚೆ ನಡೀತಿದ್ದು ಈ ವೇಳೆ ಜಿ 20 ರಾಷ್ಟ್ರಗಳು ಕೂಡ ಸಭೆ ಸೇರಿದ್ವು.

-masthmagaa.com

Contact Us for Advertisement

Leave a Reply