ಅಮೆರಿಕದಲ್ಲಿ ಮತ್ತೆ 3 ಬಸ್‌ ಗಾತ್ರದ ಬಲೂನ್‌ಗಳು ಪತ್ತೆ! ಇದು ಗೂಢಚರ್ಯೆ ಅಲ್ಲ ಕಣ್ರಪ್ಪ ಎಂದ ಚೀನಾ!

masthmagaa.com:

ಚೀನಾ ಹಾಗೂ ಅಮೆರಿಕ ನಡುವೆ ಬಲೂನ್‌ ಗಲಾಟೆ ಜೋರಾಗಿದೆ. ಅಮೆರಿಕದ ನ್ಯೂಕ್ಲಿಯರ್‌ ಪ್ರದೇಶಗಳ ಮೇಲೆ ಅಮೆರಿಕದ ವಾಯುಪ್ರದೇಶದಲ್ಲಿ ಚೀನಾ ತನ್ನ ಗೂಢಚಾರಿ ಬಲೂನನ್ನ ಬಿಟ್ಟಿದೆ ಅಂತ ಅಮೆರಿಕ ಆರೋಪ ಮಾಡಿದ ವಿಚಾರ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಇದೀಗ ಅಮೆರಿಕದ ಸೆಕ್ರಟ್ರಿ ಆಫ್‌ ಅಂಟನಿ ಬ್ಲಿಂಕನ್‌ ತಮ್ಮ ಚೀನಾ ಪ್ರವಾಸವನ್ನೇ ರದ್ದು ಗೊಳಿಸಿದ್ದಾರೆ. ತೈವಾನ್‌ ವಿಚಾರ ಹಾಗೂ ಇನ್ನಿತರ ಜಾಗತಿಕ ವಿಚಾರಗಳಲ್ಲಿ ಚೀನಾ ಹಾಗೂ ಅಮೆರಿಕ ಮಧ್ಯೆ ಉದ್ವಿಗ್ನ ವಾತವರಣ ಇತ್ತು. ಇದನ್ನ ಶಮನ ಮಾಡೋ ಸಲುವಾಗಿ ಬ್ಲಿಂಕನ್‌ ಅವರ ಭೇಟಿ ತುಂಬಾ ಪ್ರಮುಖ ಪಾತ್ರ ವಹಿಸುತ್ತೆ ಅಂದಾಜು ಮಾಡಲಾಗಿತ್ತು. ಆದ್ರೆ ಈಗ ಆ ಮಹತ್ವದ ಭೇಟಿಯೇ ರದ್ದಾಗಿದೆ. ಅಲ್ದೇ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರೋ ಅಮೆರಿಕದ ಅಧ್ಯಕ್ಷೀಯ ಕಚೇರಿ ವೈಟ್‌ ಹೌಸ್‌, ನಾವು ಈ ವಿಚಾರವನ್ನ ಗಂಭೀರವಾಗಿ ತಗೊಂಡಿದ್ದೀವಿ. ಈ ಪ್ರಕರಣದ ಬಗ್ಗೆ ತುಂಬಾ ನಿಗಾ ಇಟ್ಟಿದ್ದೀವಿ ಅಂತ ಹೇಳಿದೆ. ಇನ್ನು ಬಲೂನ್‌ ಬಗ್ಗೆ ಚೀನಾ ಕೂಡ ಪ್ರತಿಕ್ರಿಯಿಸಿದ್ದು ಚೀನಾ ವಿಶ್ವದಲ್ಲಿ ಒಂದು ಜವಾಬ್ದಾರ ದೇಶ. ಅದು ಯಾವುದೇ ಕಾರಣಕ್ಕೂ ಅಂತಾರಾಷ್ಟೀಯ ಕಾನೂನುಗಳನ್ನ ಮುರಿಯುದಿಲ್ಲ ಅಥವಾ ಬೇರೆ ದೇಶಗಳ ಸಾರ್ವಭೌಮತೆಗೆ ದಕ್ಕೆ ತರೋದಿಲ್ಲ. ಈಗ ಬಲೂನ್‌ ವಿಚಾರ ಕೂಡ ತುಂಬಾ ಹತ್ತಿರದಿಂದ ಗಮನಿಸ್ತೇವೆ. ಇದು ಚೀನಾದ ಬಲೂನ್‌ ಹೌದು. ಆದ್ರೆ ಇದು ಗೂಢಚಾರಕ್ಕಲ್ಲ. ನಾಗರೀಕ ಉದ್ದೇಶಗಳಿಗೆ. ಹವಾಮಾನ ಮತ್ತು ಇತರ ವೈಜ್ಞಾನಿಕ ಸಂಶೋಧನೆಗಳಿಗೆ ಇದನ್ನ ಬಳಸಲಾಗುತ್ತದೆ. ಹವಾಮಾನ ಕಾರಣದಿಂದ ದಾರಿ ತಪ್ಪಿ ಅದು ನಿಮ್ಮ ವಾಯುಪ್ರದೇಶಕ್ಕೆ ಎಂಟ್ರಿಯಾಗಿದೆ. ಅದನ್ನ ಬಿಟ್ರೆ ಇದ್ರಲ್ಲಿ ಯಾವುದೇ ಗೂಢಚಾರ ಉದ್ದೇಶ ಇಲ್ಲ… ಅಂತ ವಿಷಾದ ಹೇಳಿದೆ. ಆದ್ರೆ ಚೀನಾದ ಈ ವಿಷಾದಕ್ಕೆ ಅಮೆರಿಕ ಕಿಡಿಕಾರಿದ್ದು ಇದು ಖಂಡಿತಾ ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ. ಇದನ್ನ ಒಪ್ಪಿಕೊಳ್ಳೋಕೆ ಸಾಧ್ಯವೇ ಇಲ್ಲ ಅಂತ ಹೇಳಿದೆ. ಈ ನಡುವೆ ಅಮೆರಿಕದಲ್ಲಿ ಇನ್ನೂ 3 ಬಸ್‌ ಗಾತ್ರದ ಬಲೂನ್‌ ಓಡಾಡೋ ಮಾಹಿತಿ ಇದೆ ಅಂತ ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply