ಮಾನ್ಯತೆ, ಬೆಂಬಲ ಪಡೆಯೋದು ತಾಲಿಬಾನಿಗಳ ಕೈಯಲೇ ಇದೆ: ಅಮೆರಿಕ

masthmagaa.com:

ಅಫ್ಘಾನಿಸ್ತಾನದಿಂದ ಹೊರಹೋಗ್ತಿರೋ ಅಮೆರಿಕ, ತಾಲಿಬಾನಿಗಳಿಗೆ ಮಾನ್ಯತೆ ನೀಡೋ ಬಗ್ಗೆ ಮಾತಾಡಿದೆ. ಅಂದ್ರೆ ತಾಲಿಬಾನಿಗಳಿಗೆ ನಾವು ಮಾನ್ಯತೆ ನೀಡೋದಲ್ಲ.. ಮಾನ್ಯತೆ ಮತ್ತು ಬೆಂಬಲವನ್ನು ಅವರೇ ಗಳಿಸಿಕೊಳ್ಳಬೇಕು ಅಂತ ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ ಅಂಟೋನಿ ಬ್ಲಿಂಕನ್ ಹೇಳಿದ್ದಾರೆ. ನಮ್ಮ ಸೇನೆ ಅಫ್ಘಾನಿಸ್ತಾನದಿಂದ ಹೊರಬಂದಿದೆ. ಅಫ್ಘಾನಿಸ್ತಾನ ಜೊತೆಗೆ ಅಮೆರಿಕದ ಸಂಬಂಧದಲ್ಲಿ ಹೊಸ ಚಾಪ್ಟರ್ ಶುರುವಾಗಿದೆ. ಮಿಲಿಟರಿ ಕಾರ್ಯಾಚರಣೆ ಮುಗಿದಿದೆ. ರಾಜತಾಂತ್ರಿಕ ಮಿಷನ್ ಶುರುವಾಗಿದೆ. ಅಫ್ಘಾನಿಸ್ತಾನ ತೊರೆಯಲು ಬಯಸೋ ಎಲ್ಲರಿಗೂ ಸಹಾಯ ಮಾಡಲು ಅಮೆರಿಕ ಬದ್ಧ ಅಂತ ಹೇಳಿದ್ದಾರೆ. ಜೊತೆಗೆ ಅಫ್ಘಾನಿಸ್ತಾನದಲ್ಲಿ ಇನ್ನು 200 ಮಂದಿಗಿಂತ ಕಡಿಮೆ ಅಮೆರಿಕನ್ನರು ಉಳಿದಿದ್ದು, ಅವರಲ್ಲಿ ದೇಶ ತೊರೆಯಲು 100 ಮಂದಿ ಮಾತ್ರ ಬಯಸಿದ್ದಾರೆ ಅಂತ ಕೂಡ ಬ್ಲಿಂಕನ್ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply