ಯುಎಇಯಲ್ಲಿ ಕೆಲಸ ಮಾಡೋಕೆ ಬಯಸೋರಿಗೆ ಸಿಹಿಸುದ್ದಿ!

masthmagaa.com:

ಯುನೈಟೆಡ್​​ ಅರಬ್ ಎಮಿರೇಟ್ಸ್​​​​​ಗೆ ಹೋಗಿ ಕೆಲಸ ಮಾಡಬೇಕು ಅಂತ ಬಯಸೋರಿಗೆ ಒಂದು ಸಿಹಿ ಸುದ್ದಿ.. ಯುಎಇ ಹೊಸ ರೀತಿಯ ಒಂದು ವೀಸಾ ಲಾಂಚ್ ಮಾಡಿದೆ. ಇದನ್ನು ಗ್ರೀನ್ ವೀಸಾ ಅಂತ ಕರೆಯಲಾಗಿದೆ. ಈ ಮೂಲಕ ಯಾರು ಬೇಕಾದ್ರೂ ನೇರವಾಗಿ ಯುಎಇಗೆ ಹೋಗಿ ಕೆಲಸ ಮಾಡಬಹುದಾಗಿದೆ. ಈ ಹಿಂದೆ ಯಾರಾದ್ರೂ ಇಲ್ಲಿಗೆ ಕೆಲಸಕ್ಕೆ ಹೋಗಬೇಕಾದ್ರೆ ಅಲ್ಲಿ ಉದ್ಯೋಗ ನೀಡಿದ ಕಂಪನಿಯವರೇ ವೀಸಾ ಸ್ಪಾನ್ಸರ್ ಮಾಡಬೇಕಾಗಿತ್ತು. ಉದ್ಯೋಗಕ್ಕೆ ಸೀಮಿತವಾಗಿ ವೀಸಾ ನೀಡಲಾಗ್ತಿತ್ತು. ಆದ್ರೀಗ ಗ್ರೀನ್ ವೀಸಾ ಅದರ ಅಗತ್ಯತೆಯನ್ನು ತೆಗೆದು ಹಾಕಿದೆ. ಈ ಹೊಸ ಗ್ರೀನ್ ವೀಸಾ ಪಡೆಯುವವರು ತಮ್ಮ ಕಂಪನಿಯ ಸ್ಪಾನ್ಸರ್​​ಶಿಪ್ ಇಲ್ಲದೇ ಅಲ್ಲಿ ತಮ್ಮ ತಂದೆ-ತಾಯಿ ಮತ್ತು 25 ವರ್ಷದೊಳಗಿನ ಮಕ್ಕಳಿಗೂ ಸ್ಪಾನ್ಸರ್ ನೀಡಬಹುದಾಗಿದೆ. ಕೌಶಲ್ಯಯುತ ವ್ಯಕ್ತಿಗಳು, ಬಂಡವಾಳ ಹೂಡಿಕೆದಾರರು, ಉದ್ಯಮಿಗಳು, ವ್ಯಾಪಾರಿಗಳು ಮತ್ತು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಹೆಜ್ಜೆ ಇಡಲಾಗಿದೆ ಅಂತ ಫಾರಿನ್ ಟ್ರೇಡ್​​​ನ ರಾಜ್ಯ ಖಾತೆ ಸಚಿವ ಥಾನಿ ಅಲ್ ಝೇಯೌದಿ ಹೇಳಿದ್ದಾರೆ. ಯುಎಇ ಸೇರಿದಂತೆ ಹಲವು ಗಲ್ಫ್​ ದೇಶಗಳ ಆರ್ಥಿಕತೆ ತೈಲದ ಮೇಲೆ ನಿಂತಿವೆ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ತೈಲದ ಮೇಲಿನ ಅವಲಂಬನೆಯನ್ನು ತಪ್ಪಿಸಿ, ಬೇರೆ ಆದಾಯ ಮೂಲಗಳ ಕಡೆಗೆ ಗಮನ ನೀಡ್ತಿವೆ. ಯುಎಇಯ ಗ್ರೀನ್ ವೀಸಾ ಕೂಡ ಅದ್ರ ಭಾಗವೇ ಆಗಿದೆ.

-masthmagaa.com

Contact Us for Advertisement

Leave a Reply