“ಕುದ್ರು”ವಿನ ಮೂರನೇ ಹಾಡು ರಿಲೀಸ್: ಮಾನವೀಯ ಮೌಲ್ಯ ಸಾರುವ ಈ ಸಿನಿಮಾ ಸಧ್ಯದಲ್ಲೇ ರಿಲೀಸ್ ಆಗತ್ತೆ!

masthmagaa.com:

“ಕುದ್ರು” ಚಿತ್ರದ “ಉಡಾಯಿಸು” ಎಂಬ ಹಾಡು ಇತ್ತೀಚಿಗೆ ಬಿಡುಗಡೆಯಾಗಿದೆ. ಇದು ಚಿತ್ರದ ಮೂರನೇ ಹಾಡಾಗಿದೆ. ಈ ಹಾಡನ್ನು ಉಡುಪಿ ಹಾಗೂ ಮಲೆನಾಡು ಪ್ರದೇಶದ ಸುಂದರ ಪರಿಸರದಲ್ಲಿ ಚಿತ್ರಿಕರಿಸಲಾಗಿದೆ. *ಉಡಾಯಿಸು* ಹಾಡು ಕಾಲೇಜು ಹುಡುಗರಿಗಾಗಿ ಚಿತ್ರೀಕರಿಸಿದ ಹಾಡು. ಕಾಲೇಜಲ್ಲಿ ಕ್ಲಾಸ್ ಬಂಕ್ ಮಾಡಿ ಎಂಜಾಯ್ ಮಾಡುವ ಗೀತೆಯಿದು.

ನಾನು ಮೂಲತಃ ಉಡುಪಿಯವನು. ನೀರಿನಿಂದ ಸುತ್ತುವರೆದ ದ್ವೀಪವನ್ನು ತುಳುವಿನಲ್ಲಿ “ಕುದ್ರು ಎನ್ನುತ್ತಾರೆ. ಈ ಚಿತ್ರದ ಕಥೆಯನ್ನು ನಾನೇ ಬರೆದು ನಿರ್ದೇಶಿಸಿ, ನಿರ್ಮಾಣ ಮಾಡಿದ್ದೇನೆ ಎಂದು ಭಾಸ್ಕರ ನಾಯ್ಕ್ ಹೇಳಿದರು.

“ಕುದ್ರು” ದ್ವೀಪದಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಮೂರು ಪಂಗಡದವರು ವಾಸಿಸುತ್ತಿರುತ್ತಾರೆ. ಎಲ್ಲರೂ ಸಹಬಾಳ್ವೆಯಿಂದ ಜೀವನ ನಡೆಸುತ್ತಿರುತ್ತಾರೆ. ಈ ರೀತಿಯಲ್ಲಿ ನಮ್ಮ ಚಿತ್ರದ ಕಥೆ ಸಾಗುತ್ತದೆ. ಉಡುಪಿ, ಬೆಂಗಳೂರು, ಗೋವಾ ಹಾಗೂ ಸೌದಿ ಅರೇಬಿಯಾದಲ್ಲಿ ಚಿತ್ರೀಕರಣ ಮಾಡಿದ್ದೇವೆ.

“ಕುದ್ರು” ನನ್ನ ಮೊದಲ ನಿರ್ದೇಶನದ ಚಿತ್ರ. ಒಂದು ಸಣ್ಣ ದ್ವೀಪದಲ್ಲಿ ಬೇರೆಬೇರೆ ಸಮುದಾಯದವರು ಸಾಮರಸ್ಯದಿಂದ ಬಾಳುತ್ತಿದಾಗ, ಒಂದು ವಾಟ್ಸಾಪ್ ಸಂದೇಶ ಹೇಗೆ ಅಶಾಂತಿಯನ್ನು ತಂದು ಹಾಕುತ್ತದೆ ಹಾಗೂ ಬಂದ ತೊಂದರೆಯನ್ನು ನಿವಾರಣೆ ಮಾಡಿಕೊಂಡು‌ ಮತ್ತೆ ಸಾಮರಸ್ಯದಿಂದ ಹೇಗೆ ಜೀವನ ನಡೆಸಬಹುದು ಎಂಬುದನ್ನು “ಕುದ್ರು” ಚಿತ್ರದಲ್ಲಿ ತೋರಿಸುತ್ತಿದ್ದೇವೆ.

ಹರ್ಷಿತ್ ಶೆಟ್ಟಿ, ಗಾಡ್ವಿನ್ ಹಾಗೂ ಫರ್ಹಾನ್ ಚಿತ್ರದ ನಾಯಕರಾಗಿ ನಟಿಸಿದ್ದು, ಪ್ರಿಯಾ ಹೆಗ್ಡೆ, ವಿನುತ ಹಾಗೂ ಡೈನ ಡಿಸೋಜ ನಾಯಕಿಯಾಗಿ ಅಭಿನಯಿಸಿದ್ದಾರೆ. ಪ್ರತೀಕ್ ಕುಂಡು ಸಂಗೀತ ನಿರ್ದೇಶನ ಮಾಡಿ, ಸುದೇಷ್ಣ ದಾಸ್ ಹಾಗೂ ಪ್ರತೀಕ್ ಕುಂಡು ದ್ವನಿ ಕೊಟ್ಟಿರುತ್ತಾರೆ.

-masthmagaa.com

https://youtu.be/ZDNrCl9UD60?si=ciHWql8QV0n9GcTn

Contact Us for Advertisement

Leave a Reply