ಪಾಕ್​ನಲ್ಲಿ ಏಲಿಯನ್​.. ಇಮ್ರಾನ್​ ಖಾನ್​ರಿಂದ ಬಾಹ್ಯಾಕಾಶದಲ್ಲೂ ಭಿಕ್ಷಾಟನೆ!?

masthmagaa.com:

ಅನ್ಯಗ್ರಹ ಜೀವಿಗಳು ಮತ್ತು ಹಾರುವ ತಟ್ಟೆಗಳ ಬಗ್ಗೆ ಆಗಾಗ ಚರ್ಚೆ ನಡೀತಾನೇ ಇರುತ್ತೆ. ಅನ್ಯಗ್ರಹ ಜೀವಿಗಳು ಇರೋದು ನಿಜಾನಾ ಅನ್ನೋದಕ್ಕೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. UFO ಅಥವಾ ಹಾರುವ ತಟ್ಟೆಗಳ ರಹಸ್ಯ ಕೂಡ ಇದುವರೆಗೆ ಗೊತ್ತಾಗಿಲ್ಲ. ಇದೀಗ ನಮ್ಮ ಪಕ್ಕದ ಪಾಕಿಸ್ತಾನದ ಆಕಾಶದಲ್ಲಿ UFO ಒಂದು ಪ್ರತ್ಯಕ್ಷವಾಗಿದೆ. ಪಾಕಿಸ್ತಾನ್ ಇಂಟರ್​ನ್ಯಾಷನಲ್ ಏರ್​ಲೈನ್ಸ್​ (PIA) ವಿಮಾನದ ಪೈಲಟ್​ಗಳ ಕಣ್ಣಿಗೆ ಈ UFO ಬಿದ್ದಿದೆ ಅಂತ ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಅಂದ್ಹಾಗೆ ಈ ವಿಮಾನವು ಕರಾಚಿಯಿಂದ ಲಾಹೋರ್​ಗೆ ಹಾರಿತ್ತು. ವಿಮಾನವು ರಹಿಂ ಯಾರ್ ಖಾನ್ ಅನ್ನೋ ನಗರದ ಮೇಲೆ ಹಾರ್ತಿದ್ದಾಗ ಪೈಲಟ್​ಗಳಿಗೆ ಈ ಹಾರುವ ತಟ್ಟೆ ಕಾಣಿಸಿದೆ. ಸೂರ್ಯನ ಬೆಳಕಿನ ನಡುವೆಯೂ ಈ ವಸ್ತು ತುಂಬಾ ಪ್ರಕಾಶಮಾನವಾಗಿ ಹೊಳೀತಿತ್ತು ಅಂತ ಪೈಲಟ್ ಹೇಳಿದ್ದಾರೆ. ಜೊತೆಗೆ ವಿಮಾನ ಸಿಬ್ಬಂದಿ ತಾವು ನೋಡಿದ್ದು ಯಾವುದೋ ನಕ್ಷತ್ರ ಅಥವಾ ಗ್ರಹ ಅಲ್ಲ. ಅದು ಬ್ಲಿಂಕ್ ಆಗ್ತಾ ಆಗ್ತಾ ಮುಂದಕ್ಕೆ ಚಲಿಸುತ್ತಿತ್ತು ಅಂತ ಹೇಳಿದ್ದಾರೆ. ಅದು ಸ್ಪೇಸ್ ಸ್ಟೇಷನ್ ಕೂಡ ಆಗಿರಬಹುದು ಅಥವಾ ಕೃತಕ ಗ್ರಹ ಕೂಡ ಆಗಿರಬಹುದು ಅಂತಾನೂ ವಿಮಾನ ಸಿಬ್ಬಂದಿ ಹೇಳಿದ್ದಾರೆ. ರಹಿಂ ಯಾರ್ ಖಾನ್ ನಗರದ ನಿವಾಸಿಗಳು ಇದನ್ನ ನೋಡಿದ್ದಾರೆ. ಅದರ ಫೋಟೋ, ವಿಡಿಯೋಗಳನ್ನ ಕ್ಲಿಕ್ಕಿಸಿದ್ದಾರೆ ಎನ್ನಲಾಗ್ತಿದೆ. ಇನ್ನು ತಮ್ಮ ಪೈಲಟ್​ಗೆ ಹಾರುವ ತಟ್ಟೆ ಕಾಣಿಸಿರುವ ಬಗ್ಗೆ ಪಾಕಿಸ್ತಾನ್ ಇಂಟರ್​ನ್ಯಾಷನಲ್ ಏರ್​ಲೈನ್ಸ್​ನ ಅಧಿಕಾರಿಗಳು ಮಾತನಾಡಿ, ಜನವರಿ 23ನೇ ತಾರೀಖು ಸಂಜೆ 4 ಗಂಟೆ ವೇಳೆಗೆ ಇದು ಕಾಣಿಸಿದೆ. ಆದ್ರೆ ಇದು UFOನಾ ಅಥವಾ ಬೇರೆ ಏನಾದ್ರುನಾ ಅನ್ನೋದನ್ನ ಈಗಲೇ ಹೇಳೋಕೆ ಸಾಧ್ಯವಿಲ್ಲ ಎಂದಿದ್ದಾರೆ. ಇನ್ನು ಪಾಕಿಸ್ತಾನದಲ್ಲಿ UFO ಕಾಣಿಸಿಕೊಂಡ ಬೆನ್ನಲ್ಲೇ ಪಾಕ್ ಪ್ರಧಾನಿ ಇಮ್ರಾನ್ ಖಾನ್​ ಈಗ ಬಾಹ್ಯಾಕಾಶದಲ್ಲೂ ಭಿಕ್ಷಾಟನೆ ಮಾಡಲು ತಮ್ಮ ಭಿಕ್ಷಾ ಪಾತ್ರೆಯನ್ನ ರೆಡಿ ಮಾಡ್ತಿದ್ದಾರೆ ಅಂತ ಟ್ರೋಲಿಗರು ಕಾಲೆಳೆಯುತ್ತಿದ್ದಾರೆ.

-masthmagaa.com

Contact Us for Advertisement

Leave a Reply