ಸಲಿಂಗಕಾಮದ ವಿರುದ್ಧ ಕಠಿಣ ನಿಯಮ ಜಾರಿಗೆ ಮುಂದಾದ ಉಗಾಂಡ! ಅಮೆರಿಕ ಹೇಳಿದ್ದೇನು?

masthmagaa.com:

ಸಲಿಂಗಕಾಮ ಅಥ್ವಾ LGBTQ ಗ್ರೂಪ್‌ನ ಹಕ್ಕುಗಳಿಗೆ ಸಂಬಂಧಿಸಿದಂತೆ ಜಾಗತಿಕವಾಗಿ ಸುದ್ಧಿ ಆಗ್ತಾನೆ ಇದೆ. ಇದೀಗ ಸಲಿಂಗಕಾಮ ವಿರುದ್ಧದ ಮಸೂದೆ ಒಂದಕ್ಕೆ ಉಗಾಂಡ ಅಧ್ಯಕ್ಷ ಯೊವೆರಿ ಮುಸೆವೆನಿ ಸಹಿ ಹಾಕಿದ್ದಾರೆ. ಪಾಶ್ಚಿಮಾತ್ಯ ದೇಶಗಳ ಅನೈತಿಕ ಚಟುವಟಿಕೆಯಿಂದ ಉಗಾಂಡದ ಮೌಲ್ಯಗಳನ್ನ ರಕ್ಷಿಸಿಕೊಳ್ಳಲು ಪ್ರಯತ್ನಿಸಲಾಗ್ತಿದೆ. ಅದರ ಭಾಗವಾಗಿ ಈ ಕಾನೂನನ್ನ ಜಾರಿಗೆ ತರಲಾಗ್ತಿದೆ. ಸಲಿಂಗಕಾಮಿ ಅಂತ ತಮ್ಮನ್ನ ತಾವು ಗುರುತಿಸಿಕೊಳ್ಳುವುದು ಅಪರಾಧವಲ್ಲ, ಆದ್ರೆ ಸಲಿಂಗಕಾಮ ಆಕ್ಟಿವಿಟಿಗಳಲ್ಲಿ ಹೆಚ್ಚಾಗಿ ಇನ್ವಾಲ್ವ್‌ ಆಗೋದು ಅಪರಾಧ ಅಂತ ಹೊಸ ಕಾನೂನಿನಲ್ಲಿ ತಿಳಿಸಲಾಗಿದೆ. ಅಂದ್ಹಾಗೆ ಮೊದಲಿನಿಂದಲೂ ಸಲಿಂಗಕಾಮಕ್ಕೆ ಮರಣದಂಡನೆ ವಿಧಿಸುವ ಕಾನೂನು ಉಗಾಂಡದಲ್ಲಿ ಇದೆ. ಆದ್ರೆ ಈ ನೂತನ ಮಸೂದೆಯಲ್ಲಿ ಇದನ್ನ ಕೈಬಿಡುವಂತೆ ಅಧ್ಯಕ್ಷ ಯೊವೆನಿ ಸೂಚಿಸಿದ್ದರು. ಆದ್ರೆ ಅಲ್ಲಿನ ಶಾಸಕರು ಅದಕ್ಕೆ ಒಪ್ಪಿಕೊಳ್ಳದೇ ಸಲಿಂಗಕಾಮದಲ್ಲಿ ತೊಡಗಿದವರಿಗೆ ಜೈಲು ಶಿಕ್ಷೆ ಜೊತೆಯಲ್ಲಿ ಮರಣದಂಡನೆಯನ್ನ ಸಹ ವಿಧಿಸಲಾಗುತ್ತೆ ಅಂತ ಈ ನೂತನ ಕಾನೂನಿನಲ್ಲಿ ತಿಳಿಸಲಾಗಿದೆ. ಇನ್ನು ಈ ಕಾನೂನು, ಸಮಾನತೆ ಮತ್ತು ತಾರತಮ್ಯ ಹಕ್ಕುಗಳಿಗೆ ವಿರುದ್ಧವಾಗಿದೆ ಅಂತ ಅಲ್ಲಿನ ಮಾನವ ಹಕ್ಕುಗಳ ಫೋರಮ್‌ ಮುಖ್ಯಸ್ಥ ಅಡ್ರಿಯನ್ ಜುಕೊ ಹೇಳಿದ್ದಾರೆ. ಅಲ್ದೆ ಈ ಹೊಸ ಕಾನೂನು ಉಗಾಂಡದ ಸಂವಿಧಾನಕ್ಕೂ ಅಪೋಸಿಟ್‌ ಆಗಿದೆ ಅಂತ ಖಂಡಿಸಿದ್ದಾರೆ. ಇತ್ತ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಕೂಡ ಉಗಾಂಡದ ಕ್ರಮವನ್ನ ಖಂಡಿಸಿದ್ದು, ಇದು ಸಾರ್ವತ್ರಿಕ ಮಾನವ ಹಕ್ಕುಗಳ ಅತಿದೊಡ್ಡ ಉಲ್ಲಂಘನೆ ಅಂತ ಹೇಳಿದ್ದಾರೆ. ಜೊತೆಗೆ ಕೂಡಲೇ ಈ ಕ್ರಮವನ್ನ ರದ್ಧಗೊಳಿಸಬೇಕು ಅಂತ ಒತ್ತಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply