ʻಟಿಪ್ಪು ಗನ್‌ʼ ರಫ್ತನ್ನ ಬ್ಯಾನ್‌ ಮಾಡಿದ ಬ್ರಿಟನ್‌! ಯಾಕೆ?

masthmagaa.com:

ಮೈಸೂರಿನ ಟಿಪ್ಪು ಸುಲ್ತಾನರಿಗೆ ಸಂಬಂಧಿಸಿದ ಆಕರ್ಷಕ ವಿನ್ಯಾಸದ ಬಂದೂಕು ಒಂದು ಬ್ರಿಟನ್‌ನ ವ್ಯಕ್ತಿಯೊಬ್ಬರ ಬಳಿಯಿದ್ದು, ಅದನ್ನ ರಫ್ತು ಮಾಡದಂತೆ ಬ್ರಿಟನ್‌ ಸರ್ಕಾರ ನಿಷೇಧ ಹೇರಿದೆ. ಭಾರತ ಮತ್ತು ಬ್ರಿಟನ್‌ ಇತಿಹಾಸ ಹಾಗೂ ಹೋರಾಟದ ಅವಧಿ ಕುರಿತು ಅಧ್ಯಯನ ನಡೆಸಲು, ಈ ಬಂದೂಕು ವಶಕ್ಕೆ ತೆಗೆದುಕೊಳ್ಳೋಕೆ ಸರ್ಕಾರ ಮುಂದಾಗಿದೆ. ಈ ಹಿನ್ನಲೆಯಲ್ಲಿ ʻಫ್ಲಿಂಟ್‌ಲಾಕ್‌ ಸ್ಪೋರ್ಟಿಂಗ್‌ ಗನ್‌ʼನ ಎಕ್ಸ್‌ಪೋರ್ಟ್‌ ಮೇಲೆ ನಿಷೇಧ ಹೇರಲಾಗಿದೆ ಅಂತ ಬ್ರಿಟನ್‌ನ ಆರ್ಟ್‌ ಅಂಡ್‌ ಹೆರಿಟೇಜ್‌ ಸಚಿವ ಲಾರ್ಡ್‌ ಸ್ಟೀಫನ್‌ ಪಾರ್ಕಿನ್‌ಸನ್‌ ಹೇಳಿದ್ದಾರೆ. ಇದೇ ವೇಳೆ ಸಾಕಷ್ಟು ಆಕರ್ಷಣೆಯಿಂದ ಕೂಡಿರುವ ಈ ಶಸ್ತ್ರ ತನ್ನ ಪ್ರಾಚೀನತೆಯ ಕಾರಣದಿಂದಲೇ ಹೆಚ್ಚು ಮಹತ್ವವನ್ನ ಪಡೆದುಕೊಂಡಿದೆ. ಬ್ರಿಟನ್‌ ಮತ್ತು ಭಾರತದ ನಡುವಿನ ಇತಿಹಾಸವನ್ನ ತಿಳಿದುಕೊ‍ಳ್ಳೋಕೆ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಜೊತೆಗೆ ಉಭಯ ದೇಶಗಳ ಹೋರಾಟದ ಇತಿಹಾಸವನ್ನ ಡೀಪ್‌ ಆಗಿ ಅಧ್ಯಯನ ಮಾಡೋಕೆ ಈ ಶಸ್ತ್ರವನ್ನ ಸಾರ್ವಜನಿಕರ ವೀಕ್ಷಣೆಗೆ ಇಡ್ಬೇಕು ಅಂತ ಸ್ಟೀಫನ್‌ ತಿಳಿಸಿದ್ದಾರೆ. ಅಂದಹಾಗೆ ಮೂರನೇ ಆಂಗ್ಲೋ ಮೈಸೂರು ಯುದ್ದದ ಸಂಧರ್ಭದಲ್ಲಿ ಈ ಬಂದೂಕನ್ನ ಅಂದಿನ ಬ್ರಿಟಿಷ್‌ ಸೇನಾಧಿಕಾರಿ ಲಾರ್ಡ್‌ ಕಾರ್ನ್‌ವಾಲೀಸ್‌ ತಗೊಂಡು ಹೋಗಿದ್ದ, ಆ ಬಳಿಕ ಅದು ಬ್ರಿಟನ್‌ಗೆ ಹೋಗಿತ್ತು ಅಂತ ಹೇಳಲಾಗ್ತಾಯಿದೆ.

-masthmagaa.com

Contact Us for Advertisement

Leave a Reply