ಮತ್ತೆ ಮೇಲೇಳ್ತಾ ಕೊರೋನಾ! ಈ ದೇಶಗಳಲ್ಲಿ ಏನಾಗ್ತಾ ಇದೆ?

masthmagaa.com:

ಒಂದ್ಕಡೆ ರಷ್ಯಾ ಯುಕ್ರೇನ್ ಯುದ್ದ ನಡೀತಿದ್ದು, ವಿಶ್ವದ ಗಮನ ಅದ್ರ ಕಡೆ ಇದ್ರೆ ಮತ್ತೊಂದ್ಕಡೆ ಕೊರೋನಾ ಮತ್ತೆ ಸದ್ದಿಲ್ಲದೇ ಹರಡೋಕೆ ಶುರುವಾಗಿದೆ. ಯುನೈಟೆಡ್ ಕಿಂಗ್​ಡಮ್​​ನಲ್ಲಿ 55 ವರ್ಷ ದಾಟಿದವರಲ್ಲಿ ಹೆಚ್ಚಾಗಿ ಕೊರೋನಾ ಪತ್ತೆಯಾಗ್ತಿದೆ. ಅದ್ರಲ್ಲೂ ಬೂಸ್ಟರ್ ಶಾಟ್ ಹಾಕಿಸಿಕೊಂಡವರು ಕೂಡ ಕೊರೋನಾಗೆ ತುತ್ತಾಗ್ತಿದ್ದು, ಇದ್ರ ಹಿಂದೆ ಒಮೈಕ್ರಾನ್​ನ ಸಬ್​ವೇರಿಯಂಟ್ ಪಾತ್ರ ಇರಬಹುದು ಅಂತ ತಜ್ಞರು ಅಂದಾಜಿಸಿದ್ದಾರೆ. ಜೊತೆಗೆ ಯುನೈಟೆಡ್ ಕಿಂಗ್​​​ಡಮ್​​ನಲ್ಲಿ ಸೋಂಕಿನ ಸಂಖ್ಯೆ ಜೊತೆಗೆ ಆಸ್ಪತ್ರೆಗೆ ದಾಖಲಾಗ್ತಿರೋರ ಸಂಖ್ಯೆ ಕೂಡ ಜಾಸ್ತಿ ಆಗ್ತಿದೆ. ಫೆಬ್ರುವರಿ ಅಂತ್ಯದ ವೇಳೆಗೆ ಪ್ರತಿದಿನದ ಕೇಸ್​ಗಳ ಸಂಖ್ಯೆ 31 ಸಾವಿರಕ್ಕೆ ಇಳಿದಿತ್ತು. ಆದ್ರೆ ಈಗ ಪ್ರತಿದಿನದ ಕೊರೋನಾ ಪ್ರಕರಣಗಳ ಸಂಖ್ಯೆ 68 ಸಾವಿರಕ್ಕೆ ಏರಿಕೆಯಾಗಿದೆ.
ಇನ್ನು ಚೀನಾದಲ್ಲಿ ವಿಂಟರ್ ಒಲಿಂಪಿಕ್ಸ್​ ಬಳಿಕ ಕೊರೋನಾ ಜಾಸ್ತಿಯಾಗ್ತಿರೋ ಹಾಗೆ ಕಾಣಿಸ್ತಿದೆ. ಯಾಕಂದ್ರೆ ಚೀನಾದಲ್ಲಿಂದು ಒಂದೇ ದಿನ ಸ್ಥಳೀಯವಾಗಿ 528 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಅದ್ರಲ್ಲಿ 402 ಮಂದಿಗೆ ಸ್ಥಳೀಯವಾಗಿ ಸೋಂಕು ತಗುಲಿದ್ರೆ, ಇನ್ನು 126 ಮಂದಿ ವಿದೇಶದಿಂದ ಬಂದವರಾಗಿದ್ದಾರೆ.

-masthmagaa.com

Contact Us for Advertisement

Leave a Reply