ಬ್ರಿಟನ್‌ ಸಂಸತ್ತಿನಲ್ಲಿ ಮಣಿಪುರ ಗಲಭೆಗೆ ಧರ್ಮದ ಲೇಪನ!

masthmagaa.com:

ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರಾಮುಖ್ಯತೆ ಹೆಚ್ಚಾಗ್ತಿದೆ ಅಂತ ಚರ್ಚೆ ನಡೀತಿರೋ ಹೊತ್ತಲ್ಲೇ ಭಾರತದ ವಿಷಯಗಳು ಕೂಡ ಜಾಗತಿಕವಾಗಿ ಚರ್ಚೆಯಾಗ್ತಿವೆ. ಭಾರತದಲ್ಲಿ ಚುನಾವಣೆ ಹತ್ರವಾಗ್ತಿದ್ಹಾಗೆ ಇತ್ತೀಚೆಗೆ ಕೆಲ ಬ್ರಿಟನ್‌ ದಿನಪತ್ರಿಕೆಗಳು ಮೋದಿ ಸರ್ಕಾರದ ವಿರುದ್ದ ಬೊಟ್ಟು ಮಾಡಿ ವರದಿ ಮಾಡಿದ್ವು. ಆದ್ರೆ ಇದೀಗ ಭಾರತದ ವಿಷಯವೊಂದು ನೇರ ಬ್ರಿಟನ್‌ನ ಸಂಸತ್ತಿನಲ್ಲೇ ಚರ್ಚೆಯಾಗಿದೆ. ಬ್ರಿಟನ್‌ನ ಮಾಜಿ ಪ್ರಧಾನಿ ಡೇವಿಡ್‌ ಕ್ಯಾಮರೂನ್‌, ಮಣಿಪುರದ ಹಿಂಸಾಚಾರ ಕೇವಲ ಜನಾಂಗೀಯ ಸಂಘರ್ಷವಲ್ಲ ಇದ್ರಲ್ಲಿ ಧರ್ಮದ ಲೇಪನ ಕೂಡ ಇದೆ ಅಂತ ಗಂಭೀರ ಆರೋಪ ಮಾಡಿದ್ದಾರೆ. ಮಣಿಪುರ ಸಂಘರ್ಷದ ನಂತ್ರ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಸ್ಥಿತಿ ಹೇಗಿದೆ ಅಂತ ಸಂಸದರೊಬ್ರು ಪ್ರಶ್ನೆ ಮಾಡಿದ್ರು. ಇದಕ್ಕೆ ಉತ್ತರಿಸಿದ ಡೇವಿಡ್‌, ಈ ಬಗ್ಗೆ ಡೇವಿಡ್‌ ಜೆ. ಕ್ಯಾಂಪನೇಲ್‌ ಅನ್ನೋರು ಬರೆದ ರಿಪೋರ್ಟ್‌ ಒಂದನ್ನ ಸ್ಟಡಿ ಮಾಡಿದ್ದೇನೆ. ಹೌದು ಕೆಲವೊಮ್ಮೆ ಇಂತಹ ಹಿಂಸಾಚಾರಗಳು ಬುಡುಕಟ್ಟು, ಜನಾಂಗೀಯವಾಗಿರುತ್ತೆ. ಆದ್ರೆ ಬಹಳ ಸಲ ನೇರ ಧರ್ಮ ಕಾರಣವಾಗಿರುತ್ತೆ ಅಂದಿದ್ದಾರೆ. ಅಂದ್ಹಾಗೆ ಡೇವಿಡ್‌ ಕ್ಯಾಮರೂನ್‌ ಕೋಟ್‌ ಮಾಡಿದ ರಿಪೋರ್ಟ್‌ನಲ್ಲಿ, ʻಮಣಿಪುರದ ಗಲಭೆ, ಎರಡು ಬುಡಕಟ್ಟು ಜನಾಂಗದವ್ರ ನಡುವೆ ನಡೆದ ಸಂಘರ್ಷ ಅನ್ನೋದಾದ್ರೆ, ಅಲ್ಲಿ ಚರ್ಚ್‌ಗಳನ್ನ ಯಾಕೆ ಸುಟ್ಟು ಹಾಕಲಾಯ್ತು ಅನ್ನೋದು ಗಮನಿಸಬೇಕಾದ ಅಂಶ. ಮಣಿಪುರ ಸಂಘರ್ಷಕ್ಕೆ ಧರ್ಮದ ಆಂಗಲ್‌ ಇರೋದು ಕ್ಲಿಯರ್‌ ಆಗಿದೆʼ ಅಂತ ಹೇಳಲಾಗಿದೆ. ಇನ್ನು ಕೆಮರೂನ್‌ ನಂತ್ರ ಮತ್ತೊಬ್ಬ ಬ್ರಿಟನ್‌ ಸಂಸದ ಇಂದ್ರಜಿತ್‌ ಸಿಂಗ್‌, ಕೂಡ ಮಾತಾಡಿದ್ದಾರೆ. ʻಭಾರತದಲ್ಲಿ ಜಾತ್ಯಾತೀತ ಸಂವಿಧಾನ ಇರೋದು ನಿಜಾನೆ. ಆದ್ರೆ ಅದಿರೋವಾಗ್ಲೇ ಅಯೋಧ್ಯೆ ಸಂಘರ್ಷದಲ್ಲಿ ಸಾವಿರಾರು ಮುಸ್ಲಿಮರನ್ನ ಹತ್ಯೆ ಮಾಡಲಾಗಿದೆ. ಭಾರತದ ಗೃಹ ಸಚಿವರೊಬ್ರು ಮುಸ್ಲಿಮರನ್ನ ಕ್ರಿಮಿಗಳು ಅಂತ ಹೇಳಿದ್ದಾರೆ. ಈಗ ಮಸೀದಿಯನ್ನ ಒಡೆದು ಹಾಕಿರೋ ಜಾಗದಲ್ಲಿ ಮಂದಿರ ನಿರ್ಮಾಣ ಮಾಡಲಾಗಿದೆ. ಇಷ್ಟು ಮಾತ್ರವಲ್ದೇ ಭಾರತದಲ್ಲಿ ಕ್ರಿಶ್ಚಿಯನ್‌ರಿಗೆ ಪದೇ ಪದೇ ಕಿರುಕುಳ ನೀಡಲಾಗ್ತಿದೆ. ಜೊತೆಗೆ ಸಿಖ್ಖರು ಹಿಂದೂಗಳಂತೆ ನಡೆದುಕೊಂಡ್ರೆ ಮಾತ್ರ ಸರಿ…ಇಲ್ಲಾಂದ್ರೆ ಅವ್ರನ್ನ ಪ್ರತ್ಯೇಕತವಾದಿಗಳು ಅಂತ ಕರೆಯಲಾಗುತ್ತೆʼ ಅಂತ ಗುರುತರ ಆರೋಪ ಮಾಡಿದ್ದಾರೆ. ಇದಕ್ಕೆ ರಿಯಾಕ್ಟ್‌ ಮಾಡಿರೋ ಡೇವಿಡ್‌, ʻಇಂದ್ರಜಿತ್‌ ಸಿಂಗ್‌ ಹೇಳಿರೋ ಪಾಯಿಂಟ್‌ಗಳು ಬಹಳ ಇಂಪಾರ್ಟೆಂಟ್‌. ಕೆಲ ಸಂದರ್ಭಗಳಲ್ಲಿ ನಾವಿದನ್ನ ಭಾರತ ಸರ್ಕಾರದ ಮುಂದಿಟ್ಟಿದ್ವಿ. ಇದು ಇನ್ಮುಂದೆನೂ ಕಂಟಿನ್ಯೂ ಆಗ್ಬೇಕುʼ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply