ಅಕ್ಷತಾ ಮೂರ್ತಿ ಟ್ಯಾಕ್ಸ್ ವಿವಾದ: ಪತಿ ರಿಷಿ ಸುನಾಕ್​ ಹೇಳಿದ್ದೇನು?

masthmagaa.com:

ಇನ್ಫೊಸಿಸ್‌ ಮುಖ್ಯಸ್ಥ ನಾರಾಯಣ ಮೂರ್ತಿಯವರ ಮಗಳು ಅಕ್ಷತಾ ಮೂರ್ತಿಯವರ ಟ್ಯಾಕ್ಸ್‌ ವಿವಾದ ಬ್ರಿಟನ್‌ನಲ್ಲಿ ರಾಜಕೀಯ ರೂಪ ಪಡೆದುಕೊಳ್ತಿರೋ ಹೊತ್ತಲ್ಲೇ ಅಕ್ಷತಾ ಪತಿ, ಸದ್ಯ ಬ್ರಿಟನ್‌ ಸರ್ಕಾರದ ಹಣಕಾಸು ಸಚಿವರಾಗಿರೋ ರಿಷಿ ಸುನಾಕ್‌ ಸುಂಕ ವಿವಾದಕ್ಕೆ ತೆರೆ ಎಳೆಯೋ ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಅಕ್ಷತಾ ಬೇರೆ ಬೇರೆ ದೇಶಗಳಲ್ಲಿ ಹೊಂದಿರೋ ಸಂಪತ್ತಿಗೆ ತೆರಿಗೆಗಳನ್ನ ಬ್ರಿಟನ್ ನಲ್ಲೇ ಕಟ್ತಾರೆ ಅಂತ ಹೇಳಿದ್ದಾರೆ. ಅಲ್ದೇ ನನ್ನ ಟೀಕಿಸುವ ಭರದಲ್ಲಿ ನನ್ನ ಪತ್ನಿಯನ್ನ ಟಾರ್ಗೆಟ್‌ ಮಾಡ್ಬಾರ್ದು. ನನ್ನನ್ನ ಮದುವೆಯಾದ ಕಾರಣಕ್ಕೆ ಅವರು ತಮ್ಮ ತಾಯ್ನಾಡಿನ ಜೊತೆ ಸಂಬಂಧ ಕಳೆದುಕೊಳ್ಳೋದಕ್ಕೆ ಇಷ್ಟ ಪಡೋದಿಲ್ಲ ಅಂತ ಹೇಳಿದ್ದಾರೆ. ಅಂದ್ಹಾಗೆ ರಿಷಿ ಸುನಾಕ್‌ ಪತ್ನಿ ಅಕ್ಷತಾ ಮೂರ್ತಿ ಆದಾಯ ತೆರಿಗೆಗಳನ್ನ ಬ್ರಿಟನ್ ಗೆ ಪೇ ಮಾಡ್ತಿಲ್ಲ ಅನ್ನೋ ಅಲ್ಲಿನ ಪ್ರತಿಪಕ್ಷಗಳ ಆರೋಪಕ್ಕೆ ಉತ್ತರಿಸಿದ್ದಅಕ್ಷತಾ, ನಾನು ಭಾರತ ದೇಶದ ಪ್ರಜೆ ನಾನ್ಯಾಕೆ ಇಲ್ಲಿಗೆ ತೆರಿಗೆ ಕಟ್ಬೇಕು ಅಂತ ಹೇಳಿಕೆ ನೀಡಿದ್ರು. ಇದು ಬ್ರಿಟನ್ನಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು.

-masthmagaa.com

Contact Us for Advertisement

Leave a Reply