ಪ್ರಧಾನಿ ಮೋದಿ ನೀಡಿದ್ದ ಆಹ್ವಾನ ಒಪ್ಪಿದ ಬೋರಿಸ್​ ಜಾನ್ಸನ್!

masthmagaa.com:

ಜಿ20 ಶೃಂಗಸಭೆಗೆ ಹೋಗಿದ್ದ ಪ್ರಧಾನಿ ಮೋದಿ ಅಲ್ಲೇ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್​​​ ಭೇಟಿಯಾಗಿದ್ದಾರೆ. ಈ ವೇಳೆ ಮುಳುಗುವ ಅಪಾಯದಲ್ಲಿರೋ ದ್ವೀಪಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಉಭಯನಾಯಕರು ಚರ್ಚಿಸಿದ್ದಾರೆ. ಕೊನೆಯಲ್ಲಿ ಪ್ರಧಾನಿ ಮೋದಿ ಭಾರತಕ್ಕೆ ಬನ್ನಿ ಅಂತ ಬೋರಿಸ್ ಜಾನ್ಸನ್​ಗೆ ಆಹ್ವಾನ ನೀಡಿದ್ರು. ಅದಕ್ಕೆ ಬೋರಿಸ್ ಜಾನ್ಸನ್ ಕೂಡ ಒಪ್ಪಿದ್ದಾರೆ. ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ಭಾರತ ಪ್ರವಾಸ ಕೈಗೊಳ್ತೀನಿ ಅಂತ ಹೇಳಿದ್ದಾರೆ. ಈ ಬಗ್ಗೆ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply