ಭಾರತ-ಇಂಗ್ಲೆಂಡ್‌ ಮ್ಯಾಚ್‌ ನೋಡೋಕೆ ಬರ್ತಾರ ಸುನಾಕ್?

masthmagaa.com:

ಇಂಡಿಯಾದಲ್ಲಿ ವರ್ಲ್ಡ್ ಕಪ್‌ ನಡೆದ್ರೇನೆ ಹಾಗೆ, ಕ್ರಿಕೆಟ್‌ ತಾಯ್ನಾಡು ಬ್ರಿಟನ್‌ ಆದ್ರೂನು ನಮ್ಮ ದೇಶದಲ್ಲಿ ಅದು ಕ್ರಿಯೇಟ್‌ ಮಾಡೋ ಹೈಪ್‌ ಬೇರೇನೆ ಇರುತ್ತೆ. ಇಲ್ಲಿ ನಡೆಯೋ ಸ್ವಾರಸ್ಯಕರ ಬೆಳವಣಿಗೆಗಳು ಹಾಗೇ ಇರುತ್ವೆ. ಬ್ರಿಟನ್‌ನಲ್ಲಿ ಇರೋದು ಒಂದೇ ಲಾರ್ಡ್ಸ್‌ ಆದ್ರೆ, ಇಂಡಿಯಾದಲ್ಲಿ ಇರೋ ಎಲ್ಲಾ ಸ್ಟೇಡಿಯಮ್‌ಗಳಲ್ಲೂ ಲಾರ್ಡ್ಸ್‌ ರೇಂಜ್‌ಗೆ ಎಕ್ಸೈಟ್‌ಮೆಂಟ್‌ ಇರುತ್ತೆ. ಅದೇ ರೀತಿ ಈ ಬಾರಿಯು ಸಹ ಅಕ್ಟೋಬರ್‌ 29ರಂದು ಲಕ್ನೋದ ಏಕನಾ ಸ್ಟೇಡಿಯಂನಲ್ಲಿ ನಡಿಯಲಿರೋ ಭಾರತ-ಇಂಗ್ಲೆಂಡ್‌ ಪಂದ್ಯ ನೋಡೋಕೆ ಬ್ರಿಟನ್‌ ಪಿಎಮ್‌ ರಿಷಿ ಸುನಾಕ್‌ ಬರೋ ಚಾನ್ಸ್‌ ಇದೆ. ಎರಡೂ ದೇಶಗಳ ನಡುವಿನ ವ್ಯಾಪಾರ ಮಾತುಕತೆಯ ವಿಚಾರವಾಗಿ ಅಕ್ಟೋಬರ್‌ 28ಕ್ಕೆ ಭಾರತಕ್ಕೆ ಬರ್ತಿರೋ ಸುನಾಕ್‌, ಈ ಪಂದ್ಯವನ್ನ ಅಟೆಂಡ್‌ ಮಾಡೋ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ.

ಅಂದ್ಹಾಗೆ ಬಹಳದಿನಗಳಿಂದಲೂ ಭಾರತ ಹಾಗೂ ಇಂಗ್ಲೆಂಡ್‌ ನಡುವೆ ಫ್ರೀ ಟ್ರೇಡ್ ಅಗ್ರೀಮೆಂಟ್(‌FTA) ಮಾಡುವ ಸಲುವಾಗಿ ಮಾತುಕತೆ ನಡೀತಿದೆ. ಬರೋಬ್ಬರಿ 14 ಸುತ್ತುಗಳ ಮಾತುಕತೆ ನಂತರ, ಕಳೆದ ತಿಂಗಳು G-20 ಮೀಟಿಂಗ್‌ ವೇಳೆ ಎರಡೂ ದೇಶಗಳ ಈ ಅಗ್ರೀಮೆಂಟ್ ಬಗ್ಗೆ ಚರ್ಚಿಸಲು ದ್ವಿಪಕ್ಷೀಯ ಮಾತುಕತೆ ಮಾಡ್ಬೇಕು ಅಂತ ಉಭಯ ದೇಶಗಳ ಪ್ರಧಾನಿಗಳು ನಿರ್ಧರಿಸಿದ್ದರು.

-masthmagaa.com

Contact Us for Advertisement

Leave a Reply