ಪಾಕಿಸ್ತಾನವನ್ನ ಅಪಾಯಕಾರಿ ದೇಶಗಳ ಪಟ್ಟಿಯಲ್ಲಿ ಹಾಕಿದ ಇಂಗ್ಲೆಂಡ್

masthmagaa.com:

ಎಫ್​ಎಟಿಎಫ್ ಅಂದ್ರೆ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್​ ಫೋರ್ಸ್​​​​​​ನಿಂದ ಹೊರಬರೋಕೆ ಪಾಕಿಸ್ತಾನ ಪರದಾಡುತ್ತಲೇ ಇದೆ. ಆದ್ರೀಗ ಪಾಕಿಸ್ತಾನಕ್ಕೆ ಇಂಗ್ಲೆಂಡ್ ದೊಡ್ಡ ಹೊಡೆತ ಕೊಟ್ಟಿದೆ. ತನ್ನ 21 ಅಪಾಯಕಾರಿ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನವನ್ನು ಸೇರಿಸಿದೆ. ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದಕರಿಗೆ ಸಹಾಯ ಮಾಡಿದ ಆರೋಪದಡಿಯಲ್ಲಿ ಈ ಕ್ರಮ ಕೈಗೊಂಡಿದೆ. ಮಾರ್ಚ್​ 26ರಿಂದಲೇ ಪೂರ್ವಾನ್ವಯವಾಗುವಂತೆ ಈ ನಿರ್ಧಾರ ಮಾಡಲಾಗಿದ್ದು, ಇದಕ್ಕೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿದೆ. ಇದೊಂದು ರಾಜಕೀಯ ಪ್ರೇರಿತ ನಿರ್ಧಾರವಾಗಿದ್ದು, ಸತ್ಯವನ್ನು ಆಧರಿಸಿಲ್ಲ. ಹೀಗಾಗಿ ಈ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಬೇಕು ಅಂತ ಹೇಳಿದೆ. ಅಂದಹಾಗೆ ರಿಪಬ್ಲಿಕ್ ಆಫ್ ಕೊರಿಯಾ, ಜಿಂಬಾಬ್ವೆ, ಸಿರಿಯಾ ಸೇರಿದಂತೆ ಹಲವು ಸಣ್ಣ ಸಣ್ಣ ದೇಶಗಳಿವೆ.. ಇದೀಗ ಆ ಪಟ್ಟಿಗೆ ಪಾಕಿಸ್ತಾನ ಕೂಡ ಸೇರಿದಂತಾಗಿದೆ.

-masthmagaa.com

Contact Us for Advertisement

Leave a Reply