ರಷ್ಯಾದ ವಿರುದ್ಧ ಅಂತರಾಷ್ಟ್ರೀಯ ಕೋರ್ಟ್‌ ಮೆಟ್ಟಿಲೇರಿದ ಯುಕ್ರೇನ್

masthmagaa.com:

ರಷ್ಯಾ ದಾಳಿ ನಡೆದ 3 ದಿನಗಳ ಬಳಿಕ ಯುಕ್ರೇನ್ ಅಂತಾರಾಷ್ಟ್ರೀಯ ಕೋರ್ಟ್ ಬಾಗಿಲು ತಟ್ಟಿದೆ. ಹೇಗ್​​ನಲ್ಲಿರೋ ಇಂಟರ್​​ನ್ಯಾಷನಲ್ ಕೋರ್ಟ್​​​​ನಲ್ಲಿ ರಷ್ಯಾ ವಿರುದ್ಧ ಯುಕ್ರೇನ್ ಕಂಪ್ಲೆಂಟ್ ಕೊಟ್ಟಿದೆ.. ಈ ಬಗ್ಗೆ ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಮಾಹಿತಿ ನೀಡಿದ್ದಾರೆ. ಜೊತೆಗೆ ಆದಷ್ಟು ಬೇಗ ರಷ್ಯಾ ತನ್ನ ಮಿಲಿಟರಿ ಚಟುವಟಿಕೆಗಳನ್ನು ನಿಲ್ಲಿಸುವಂತೆ ಆದೇಶ ನೀಡಬೇಕು. ಮುಂದಿನ ವಾರವೇ ವಿಚಾರಣೆ ಶುರು ಮಾಡುವ ನಿರೀಕ್ಷೆ ಇದೆ ಅಂತ ಟ್ವೀಟ್ ಮಾಡಿದ್ದಾರೆ. ಅಂದಹಾಗೆ ಅಂತಾರಾಷ್ಟ್ರೀಯ ನ್ಯಾಯಾಲಯ ನೆದರ್​ಲ್ಯಾಂಡ್​​ನ ಹೇಗ್​ನಲ್ಲಿದೆ. ಇದು ಯುದ್ಧಕ್ಕೆ ಕಾರಣವಾದ ರಷ್ಯನ್ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆದ್ರೆ ದೇಶಗಳ ನಡುವೆ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಸಂಬಂಧ ದೂರು ಬಂದಾಗ ಅದನ್ನು ಬಗೆಹರಿಸೋ ಅಧಿಕಾರ ಹೊಂದಿದೆ. ವಿಶ್ವಸಂಸ್ಥೆಯ ಟಾಪ್ ನ್ಯಾಯಾಂಗ ಸಂಸ್ಥೆ ಕೂಡ ಇದೇ ಆಗಿದೆ. ರಷ್ಯಾ ಅಧ್ಯಕ್ಷ ಪುಟಿನ್ ಯುಕ್ರೇನ್​​ನ ರಷ್ಯನ್ ಭಾಷೆ ಮಾತಾಡೋರು ಜಾಸ್ತಿ ಇರೋ ಡಾನ್​ಬಾಸ್​ನಲ್ಲಿ ಯುಕ್ರೇನ್ ಸೇನೆ ಪ್ರಯೋಗ ಮಾಡ್ತಿದೆ. ದಬ್ಬಾಳಿಕೆ ಮಾಡ್ತಿದೆ. ಅದನ್ನ ತಡೆಯಲು ಈ ಕಾರ್ಯಾಚರಣೆ ಅಂತ ಹೇಳ್ಕೊಂಡು ಬಂದಿದ್ದಾರೆ. ಅದ್ರೆ ಉಳಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ರಷ್ಯಾದ ಕ್ರಮ ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧ ಅಂತ ಹೇಳಿಕೊಂಡು ಬಂದಿದ್ದಾರೆ.

-masthmagaa.com

Contact Us for Advertisement

Leave a Reply