ಯಕ್ರೇನ್‌ ಯುದ್ದದಲ್ಲಿ ರಷ್ಯಾ ಗೆಲ್ಲೋಕೆ ಬಿಡಲ್ಲ: ಬೈಡೆನ್

masthmagaa.com:

ಯುಕ್ರೇನ್‌ ಯದ್ದ ನಿಧಾನಕ್ಕೆ ಅಮೆರಿಕ-ರಷ್ಯಾ ನಡುವಿನ ನೇರ ಯುದ್ಧದ ರೂಪ ಪಡೆಯುತ್ತಿರೋ ಲಕ್ಷಣ ಕಾಣಿಸ್ತಿದೆ. ಇಲ್ಲಿ ತನಕ ಯುಕ್ರೇನ್ ಮುಂದಿಟ್ಟುಕೊಂಡು ಅಮೆರಿಕ ರಷ್ಯಾ ಜೊತೆ ಫೈಟ್ ಮಾಡ್ತಿತ್ತು. ಆದ್ರೆ ಯುದ್ಧಕ್ಕೆ ಒಂದು ವರ್ಷ ಆಗು ಹೊತ್ತಿಗೆ ಸರಿಯಾಗಿ ಬೈಡೆನ್ ಯುಕ್ರೇನ್ ಗೆ ಹೋಗಿದ್ದು, ಇದೇ ಟೈಮಲ್ಲಿ ಬೈಡೆನ್-ಪುಟಿನ್ ಇಬ್ಬರೂ ಕೊಡ್ತಿರೋ ಹೇಳಿಕೆಗಳು ಬೇರೆಯದೇ ತಿರುವನ್ನ ನೀಡ್ತಿವೆ. ಯುಕ್ರೇನ್ ಸುಮ್ಮನೆ ಹೆಸರಿಗೆ ಮಾತ್ರ! ರಿಯಲ್ ಯುದ್ಧ ನಡೆತೀರೋದು ಅಮೆರಿಕ ಹಾಗೂ ರಷ್ಯಾದ ಈಗೋ ಮಧ್ಯೆ. ನಿನ್ನೆ ದೇಶವನ್ನ ಉದ್ದೇಶಿಸಿ ಮಾತಾಡಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಯುಕ್ರೇನ್‌ ಯದ್ದದಲ್ಲಿ ರಷ್ಯಾ ಗೆದ್ದೆ ಗೆಲ್ಲುತ್ತೆ ಅಂತ ‌ ಘೋಷಣೆ ಮಾಡಿದ್ರು. ಇದರ ಬೆನ್ನಲ್ಲೇ ಯುಕ್ರೇನ್-ರಷ್ಯಾ ಸಂಘರ್ಷವನ್ನ ಉದ್ದೇಶಿಸಿ ಪೋಲೆಂಡ್‌ನಲ್ಲಿ ಮಾತಾಡಿರೊ ಜೋ ಬೈಡೆನ್‌, ಯುದ್ದದಲ್ಲಿ ರಷ್ಯಾವನ್ನ ಗೆಲ್ಲಲು ಬಿಡಲ್ಲ. ಅಮೆರಿಕ ಸೇರಿದಂತೆ ಇತರ ಮಿತ್ರರಾಷ್ಟ್ರಗಳು ಯುಕ್ರೇನ್‌ ಜೊತೆಯಿವೆ ಅಂತೇಳಿದ್ದು, ಯುಕ್ರೇನ್‌ ಜೊತೆ ಕೊನೆತನಕ ನಿಲ್ಲೋದಾಗಿ ಬೈಡೆನ್‌ ಭರವಸೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪುಟಿನ್‌ರನ್ನ ಕ್ರೂರ ಸರ್ವಾಧಿಕಾರಿ ಅಂತ ಬಿಂಬಿಸಿ ಬೈಡೆನ್ ಮಾತಾಡಿದ್ದಾರೆ. ‌ಈ ಯುದ್ದದಲ್ಲಿ ಯುಕ್ರೇನ್‌ ಸ್ಟ್ರಾಂಗ್‌ ಆಗಿ ಹೆಮ್ಮೆಯಿಂದ ನಿಲ್ಲುತ್ತೆ ಅದ್ರಲ್ಲೂ ಪ್ರಮುಖವಾಗಿ ಸ್ವತಂತ್ರವಾಗಿ ಇರುತ್ತೆ ಅಂತ ಬೈಡೆನ್ ಹೇಳಿದ್ದಾರೆ. ನಿನ್ನೆ ಯುದ್ದವನ್ನ ಉದ್ದೇಶಿಸಿ ಪುಟಿನ್‌ ಕೂಡ ಮಾತಾಡಿದ್ರು. ಈ ವೇಳೆ ಯುಕ್ರೇನ್‌ ಯುದ್ದವನ್ನ ಯಾವುದೇ ಅಡೆತಡೆ ಇಲ್ದೇ ಮುಂದುವರೆಸೋದಾಗಿ ಹಾಗೂ ಯುದ್ದದಲ್ಲಿ ನಮ್ಮ ಗುರಿಯನ್ನ ಸಾಧಿಸಿಯೇ ತಿರ್ತೀವಿ ಅಂತ ಘೋಷಣೆ ಮಾಡಿದ್ರು. ಈ ಸಂಘರ್ಷಕ್ಕೆ ಸಂಪೂರ್ಣ ಜವಾಬ್ದಾರಿ ಪಾಶ್ಚಿಮಾತ್ಯ ದೇಶಗಳು ಅಂತ ಪುಟಿನ್‌ ಆರೋಪಿಸಿದ್ರು. ಪುಟಿನ್ ಯುದ್ಧಕ್ಕೆ ಮುಖ್ಯವಾಗಿ 2 ಕಾರಣಗಳನ್ನ ಕೊಟ್ರು. ಒಂದು ಡಾನ್ ಬಾಸ್ ಪ್ರದೇಶದಲ್ಲಿ ರಷ್ಯನ್ ಭಾಷಿಕರ ಮೇಲೆ ಯುಕ್ರೇನ್ ಸೇನೆ ದಾಳಿ ಮಾಡ್ತಿತ್ತು. ಹಾಗಾಗಿ ನಾವು ಅವರನ್ನ ಕಾಪಾಡಲೇಬೇಕಿತ್ತು. ಹಾಗೇ ಅಮೆರಿಕ, ಯುಕ್ರೇನ್ ಮೂಲಕ ನ್ಯಾಟೋವನ್ನ ರಷ್ಯಾ ಗಡಿಗೆ ತರೋಕೆ ಪ್ರಯತ್ನ ನಡೆಸಿತ್ತು. ಹಾಗಾಗಿ ನಾವು ಯುದ್ಧ ಮಾಡೋದು ಅನಿವಾರ್ಯ ಆಯ್ತು ಅಂತ ಪುಟಿನ್ ಹೇಳಿದ್ರು. ಇನ್ನೊಂದ್‌ ಕಡೆ ಪುಟಿನ್‌ ನಿನ್ನೆ ಅಮೆರಿಕ ಜೊತೆಗಿನ ಪರಮಾಣು ಒಪ್ಪಂದವನ್ನ ರದ್ದುಗೊಳಿಸೋದಾಗಿ ಅನೌನ್ಸ್‌ ಮಾಡಿದ್ರು. ಇದಕ್ಕೆ ಪ್ರತಿಕ್ರಿಯಿಸಿರೋ ಅಮೆರಿಕ, ಒಪ್ಪಂದವನ್ನ ಕ್ಯಾನ್ಸಲ್‌ ಮಾಡಿರೊ ರಷ್ಯಾ ನಿರ್ಧಾರ ಬೇಜವಾಬ್ದಾರಿಯಾಗಿದೆ. ರಷ್ಯಾ ಮುಂದೆ ಏನ್‌ ಮಾಡುತ್ತೆ ಅನ್ನೊದನ್ನ ನಾವು ಎಚ್ಚರಿಕೆಯಿಂದ ಆಬ್ಸರ್ವ್‌ ಮಾಡ್ತೀವಿ ಅಂತ ಅಮೆರಿಕದ ಸೆಕ್ರಟರಿ ಆಫ್‌ ಸ್ಟೇಟ್‌ ಆಂಥನಿ ಬ್ಲಿಂಕನ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply