ಪಾಕ್‌ನಿಂದ್‌ ಮರಳಿದ ಅಫ್ಘಾನ್‌ ನಿರಾಶ್ರಿತರಿಗೆ ನರಕಯಾತನೆ!

masthmagaa.com:

ಪಾಕ್‌ನಿಂದ ತವರಿಗೆ ಮರಳಿದ ಅರ್ಧ ಮಿಲಿಯನ್‌ ಅಫ್ಘಾನ್‌ ವಾಸಿಗಳು ಭೀಕರ ಚಳಿಯಿಂದ ಸಾಯಬಹುದು ಅಂತ ಯುಎನ್‌ ನಿರಾಶ್ರಿತರ ಸಂಸ್ಥೆ ಎಚ್ಚರಿಕೆ ನೀಡಿದೆ. ಅಫ್ಘಾನಿಸ್ತಾನದಿಂದ ಬಂದ ಅಕ್ರಮ ವಲಸಿಗರನ್ನ ಪಾಕ್‌ ತನ್ನ ದೇಶದಿಂದ ಹೊರಹಾಕಿದ ಹಿನ್ನಲೆ ಅಕ್ಟೊಬರ್‌ನಲ್ಲಿ ಸುಮಾರು 5 ಲಕ್ಷ ಅಫ್ಘನ್ನರು ತವರಿಗೆ ವಾಪಸ್ಸಾಗಿದ್ದರು. ಇದೀಗ ಅಫ್ಘಾನ್‌ನಲ್ಲಿ ಅವರಿಗೆಲ್ಲ ವಾಸಿಸೋಕೆ ಮನೆಗಳಿಲ್ಲ, ಸರಿಯಾದ ಬಟ್ಟೆಬರೆ ಇಲ್ಲ, ಆಹಾರ ಸಾಮಾಗ್ರಿ ಕೂಡ ತುಂಬ ಲಿಮಿಟೆಡ್‌ ಇದೆ. ಹೀಗಾಗಿ ಭೀಕರ ಚಳಿಗೆ ತತ್ತರಿಸಿ ಅವರೆಲ್ಲ ಸಾಯಬಹುದು ಅಂತ ಯುಎನ್‌ ಅಜೆನ್ಸಿ ಹೇಳಿದೆ. ಅದ್ರಲ್ಲೂ ಇದ್ರಲ್ಲಿ ಬಹಳ ಜನ ಮಹಿಳೆಯರು ಮತ್ತು ಮಕ್ಕಳಿದಾರೆ. ತೊರ್ಖಾಮ್‌ ಮತ್ತು ಸ್ಪಿನ್‌ ಬೊಲ್ಡಾಕ್‌ ಮೂಲಕ ಬರ್ತಿರೋರಲ್ಲಿ 80% ಜನ ಮಹಿಳೆಯರು ಮತ್ತು ಮಕ್ಕಳು ಇದ್ರು. ಪಾಕ್‌ನಿಂದ ಅಫ್ಘಾನ್‌ವರೆಗೆ ನಡೆದು ಬರೋವಷ್ಟರಲ್ಲಿ ಅವ್ರು ಮಾನಸಿಕವಾಗಿ ಕೂಡ ಕುಗ್ಗಿರ್ತಾರೆ ಅಂತ ಹೇಳಿದೆ. ಅಲ್ಲದೇ ಚಳಿಯಲ್ಲಿ ಬಂದಿದ್ರಿಂದ, ಬರ್ತಿರೋ ಬಹಳ ಜನಕ್ಕೆ ಬ್ರೊಂಕೈಟಸ್‌ನಂತಹ ಖಾಯಿಲೆ ಇದೆ. ಹೀಗಾಗಿ ಸಿಚುವೇಷನ್‌ ತುಂಬಾ ಸೀವಿಯರ್‌ ಆಗ್ತಿದೆ. ಇದಕ್ಕೆ ರಿಯಾಕ್ಟ್‌ ಮಾಡಿರೋ ಅಫ್ಘಾನ್‌ನ ತಾಲಿಬಾನ್‌ ಸರ್ಕಾರ ನಿರಾಶ್ರಿತರಿಗೆ ನೀರು, ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳನ್ನ ನಾವು ಒದಗಿಸ್ತೇವೆ. ಸದ್ಯ ನಿರಾಶ್ರಿತರು ಗಡಿಯ ಶಿಬಿರಗಳಲ್ಲಿ ವಾಸ ಮಾಡ್ಬಹುದು ಅಂತ ಹೇಳಿದೆ. ಆದ್ರೆ ಅದು ಸಾಕಾಗ್ತಾ ಇಲ್ಲ. ಅಘ್ಘಾನ್‌ಗೆ ವಾಪಸ್ಸಾಗ್ತಿರೋ ಬಹಳ ಜನ ಅಫ್ಘಾನಿಗಳು ಯಾವತ್ತು ಅಫ್ಘಾನಿಸ್ತಾನದಲ್ಲಿ ವಾಸನೇ ಮಾಡಿಲ್ಲ. ಹೀಗಾಗಿ ಅವ್ರಿಗೆ ಈಗ ಎಲ್ಲಿಗೆ ಹೋಗ್ಬೇಕು ಅನ್ನೋದು ಗೊತ್ತಿಲ್ಲ. ಇನ್ನು ಇದು ಸಾಲದು ಅಂತ ಇವ್ರು, ಅದ್ರಲ್ಲೂ ಎಸ್ಪೆಷಲ್ಲಿ ಮಹಿಳೆಯರು ತಾಲಿಬಾನಿಗಳ ಕಟ್ಟುನಿಟ್ಟಿನ ಕಠಿಣ ನಿಯಮಗಳನ್ನ ಪಾಲಿಸ್ಬೇಕು. ಜೊತೆಗೆ ಪುರುಷರು ಇಲ್ಲ ಅಂದ್ರೆ ಈ ಮಹಿಳೆಯರಿಗೆ ತಾಲಿಬಾನಿಗಳು ನೀಡೋ ಪುಡಿಗಾಸು ಸೌಕರ್ಯ ಕೂಡ ಸಿಗಲ್ಲ ಅಂತ ಹೇಳಲಾಗ್ತಿದೆ.

ಇನ್ನು ಇದಿಷ್ಟು ಸಾಲದು ಅಂತ ಅತ್ತ ಈ ನಿರಾಶ್ರಿತರಲ್ಲಿ ಈ ಹಿಂದೆ ಅಫ್ಘಾನ್‌ ಸೇನೆಯಲ್ಲಿ ಇದ್ದ ಸೈನಿಕರು ಕೂಡ ಇದಾರೆ. ಅಮೆರಿಕ ಬೆಂಬಲಿತ ಸರ್ಕಾರ ಅಫ್ಘಾನ್‌ನಲ್ಲಿ ಆಡಳಿತ ನಡೆಸೋವಾಗ ಅಫ್ಘಾನ್‌ ಸೇನೆಯನ್ನ ಅಮೆರಿಕ, ಬ್ರಿಟನ್‌ ಸೇರಿದಂತೆ ನ್ಯಾಟೋ ಕಂಟ್ರಿಗಳು ಟ್ರೇನ್‌ ಮಾಡ್ತಿದ್ವು. ಆದ್ರೆ ಅಮೆರಿಕ ಕಾಲ್ಕಿತ್ತು, ತಾಲಿಬಾನ್‌ ದಾಳಿ ಮಾಡಿದಾಗ ಇವ್ರೆಲ್ಲ ಎರಡು ದಿನ ಕೂಡ ನಿಲ್ಲಲಿಲ್ಲ. ಎಲ್ಲಾ ಓಡೋದ್ರು… ಹೀಗೆ ಓಡಿದವ್ರಲ್ಲಿ ಬಹಳ ಜನ ಪಾಕ್‌ ಸೇರಿದ್ರು. BBC ವರದಿಯೊಂದ್ರ ಪ್ರಕಾರ ಸದ್ಯ ಬ್ರಿಟನ್‌ ಸೇನೆ ಟ್ರೈನ್‌ ಮಾಡಿದ್ದ ಸುಮಾರು 200 ಜನ ಅಫ್ಘಾನ್‌ ಸೈನಿಕರು ಈಗ ಪಾಕ್‌ ಹೊರದಬ್ಬುತ್ತಿರೋ ನಿರಾಶ್ರಿತರಲ್ಲಿ ಇದಾರೆ. ಈಗ ವಾಪಸ್‌ ಇವ್ರು ಅಫ್ಘಾನ್‌ಗೆ ಹೋದ್ರೆ, ತಾಲಿಬಾನಿಗಳು ಆಶ್ರಯ ಕೊಡೋದಿರ್ಲಿ, ರಕ್ತವನ್ನೇ ಹೀರಿ ಹದ್ದು,ನಾಯಿಗಳಿಗೆ ಬಿಸಾಕಿ ಬಿಡ್ತಾರೆ. ಹೀಗಾಗಿ ಬ್ರಿಟನ್‌ ಸರ್ಕಾರ ಇವ್ರಿಗೆ ಸರಿಯಾದ ರಕ್ಷಣೆ ಕೊಡ್ಲಿಲ್ಲ ಅಂತ ಈಗ ಬ್ರಿಟನ್‌ನ ಜನ, ಅದ್ರಲ್ಲೂ ಬ್ರಿಟನ್‌ ಸೇನೆಯಲ್ಲಿ ಇದ್ದ ಮಾಜಿ ಅಧಿಕಾರಿಗಳು ಅಲ್ಲಿನ ಸರ್ಕಾರವನ್ನ ಬೆಂಡೆತ್ತಿದಾರೆ.

-masthmagaa.com

Contact Us for Advertisement

Leave a Reply