ವಿಶ್ವದಲ್ಲಿ ದಿನಕ್ಕೆ 33 ಕೋಟಿ ಜನ ತಿನ್ನಬಹುದಾದಷ್ಟು ಆಹಾರ ವೇಸ್ಟ್:‌ UN

masthmagaa.com:

ಜಗತ್ತಿನಲ್ಲಿ ದಿನ ನಿತ್ಯ ಸರಿಯಾಗಿ ಆಹಾರ ಸಿಗದೇ ಎಷ್ಟೋ ಜನ ತಮ್ಮ ಪ್ರಾಣ ‍ಕಳ್ಕೊತಿದ್ದಾರೆ. ಆದ್ರೆ ಇದೇ ಜಗತ್ತು ಪ್ರತಿದಿನ 1 ಬಿಲಿಯನ್‌ ಅಂದ್ರೆ 100 ಕೋಟಿ ಜನರು ಒಂದು ಹೊತ್ತು ತಿನ್ನುವಷ್ಟು ಆಹಾರವನ್ನ ವೇಸ್ಟ್‌ ಮಾಡ್ತಿದೆ ಅಂತ ವಿಶ್ವ ಸಂಸ್ಥೆ ಹೇಳಿದೆ. 2022ರಲ್ಲಿ ಜಗತ್ತಿನಲ್ಲಿ ಬರೋಬ್ಬರಿ 105 ಕೋಟಿ ಟನ್‌ ಆಹಾರ ತ್ಯಾಜ್ಯ ಉತ್ಪಾದನೆ ಆಗಿದೆ. ಅಂದ್ರೆ ಪ್ರಪಂಚದ ಜನಸಂಖ್ಯೆಗೆ ತಲಾ 132 ಕೆಜಿ ಆಹಾರ ತ್ಯಾಜ್ಯ ಉತ್ಪಾದನೆ ಆಗಿದೆ. ಇದು ಬಳಸಬಹುದಾದ ಒಟ್ಟಾರೆ ಆಹಾರದ 20%, ಮೀಲ್ಸ್‌ ಲೆಕ್ಕದಲ್ಲಿ ಹೇಳಿದ್ರೆ ದಿನಕ್ಕೆ 100 ಕೋಟಿ ಮೀಲ್ಸ್‌ ಆಗುತ್ತೆ ಅಂತ ತನ್ನ ಒಂದು ರಿಪೋರ್ಟ್‌ನಲ್ಲಿ ವಿಶ್ವಸಂಸ್ಥೆ ಹೇಳಿದೆ. ಇನ್ನು ಈ ಫುಡ್‌ ವೇಸ್ಟ್‌ ಇಂಡೆಕ್ಸ್‌ ರಿಪೋರ್ಟ್‌ನಲ್ಲಿ ಪ್ರಪಂಚದ 78.3 ಕೋಟಿ ಜನರು ದಿನದ ಒಂದೊತ್ತಿನ ಆಹಾರಕ್ಕೆ ಕಷ್ಟ ಪಡ್ತಿದ್ದಾರೆ ಅನ್ನೋ ವಿಚಾರ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply