ಮಾದಕ ವ್ಯಸನಿಗಳ ಚಟ ಬಿಡಿಸಲು ತಾಲಿಬಾನಿಗಳ ಕ್ರೂರಮಾರ್ಗ!

masthmagaa.com:

ಅಫ್ಘಾನಿಸ್ತಾನದಲ್ಲಿ ಮಾದಕ ವ್ಯಸನಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗ್ತಿದೆ. ಮಾದಕ ಪ್ರಿಯರನ್ನು ತಾಲಿಬಾನಿಗಳು ರಿಹ್ಯಾಬಿಟೇಷನ್ ಸೆಂಟರ್​ಗೆ ಕಳುಹಿಸ್ತಿದ್ದು, ಇದು ವಿಶ್ವದ ಅತಿ ಭಯಾನಕ ರಿಹ್ಯಾಬಿಟೇನ್ ಸೆಂಟರ್ ಅಂತ ಕೂಡ ಬಣ್ಣಿಸಲಾಗಿದೆ. ಇಲ್ಲಿ ಮೂರು ತಿಂಗಳು ವ್ಯಸನಿಗಳ ತಲೆ ಬೋಳಿಸಿ, ಕಠೋರವಾದ ಜೈಲಿನಲ್ಲಿ 3 ತಿಂಗಳು ಕೂಡಿಹಾಕಲು ನಿರ್ಧರಿಸಲಾಗಿದೆ. ಇಲ್ಲಿ ಮಾದಕ ವಸ್ತು ಜಾಲ ತುಂಬಾ ದೊಡ್ಡದಾಗಿ ಹರಡಿಕೊಂಡಿದೆ. ಬಡವರು, ನಿರಾಶ್ರಿತರಾಗಿದ್ದು ಕಠಿಣ ಪರಿಸ್ಥಿತಿಯಲ್ಲಿ ಬದುಕ್ತಿದ್ರೂ ಕೂಡ ಮಾದಕ ವಸ್ತು ಸೇವನೆಯನ್ನು ಬಿಡ್ತಿಲ್ಲ. ವಿಶ್ವದ 10ನೆ 9 ಭಾಗದಷ್ಟು ಅಫೀಮು ಉತ್ಪಾದನೆಯಾಗೋದು ಕೂಡ ಇಲ್ಲೇ. ಆದ್ರೆ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಹರಡಿರೋ ಅಫೀಮು ಜಾಲವನ್ನು ಕ್ರೂರವಾದ ರೀತಿಯಲ್ಲಿ ತೆಗೆದು ಹಾಕಲು ಈ ಪ್ಲಾನ್ ಮಾಡಿದೆ. ಈ ತಿಂಗಳಲ್ಲಿ 150ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಅವರನ್ನೆಲ್ಲಾ ರಿಹ್ಯಾಬಿಟೇಷನ್ ಸೆಂಟರ್​​ಗೆ ಕಳುಹಿಸಲಾಗಿದೆ.

-masthmagaa.com

Contact Us for Advertisement

Leave a Reply